ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತಗಟ್ಟೆಗೆ ಹಿರಿಯ ಅಧಿಕಾರಿಗಳ ಭೇಟಿ

Srinivasa Murthy VN
Updated On : 18 Apr 2014, 1:17 am

ಚಿಂತಾಮಣಿ: ನಗರದ ಅತಿ ಸೂಕ್ಷ್ಮ ಮತಗಟ್ಟೆಗಳಾದ ಮಾಳಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ, ಬಾಲಕರ ಸರ್ಕಾರಿ ಪ್ರೌಢಶಾಲೆ ಮತಗಟ್ಟೆಗಳಿಗೆ ಗುರುವಾರ ಬೆಂಗಳೂರ ಕೇಂದ್ರ ವಲಯ ಮಹಾ ನಿರೀಕ್ಷ ಸೈಯದ್ ಅಲ್ತಾಫ್ ಹುಸೇನ್ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಹಲವು ದಿನಗಳ ಹಿಂದೆ ಬೆಂಗಳೂರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ ಕಾಂಗ್ರೆಸ್ ಮುಖಂಡರಾದ ವಾಣಿ ಕೃಷ್ಣಾರೆಡ್ಡಿ, ಮುಕ್ತ ಮತದಾನಕ್ಕೆ ಕೋರಿ ದೂರಿನ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

ಮಾಲೂರು ತಾಲೂಕಲ್ಲಿ ಶಾಂತ ಮತ
ಮಾಲೂರು: ತಾಲೂಕಿನ ಮಾಸ್ತಿ, ಮಾಕರನಹಳ್ಳಿ ಹಾಗೂ ಚೂಕ್ಕಂಡಹಳ್ಳಿ ಗಳಲ್ಲಿ ನಡೆದ ಸಣ್ಣಪುಟ್ಟ ಚುನಾವಣೆ ಗಲಾಟೆ  ನಡುವೆಯೂ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆದಿದ್ದು,ಶೇ.70ರಷ್ಟು ಮತದಾನ ನಡೆದ ವರದಿ ಯಾಗಿದೆ.   ತಾಲೂಕಿನ ಮಾಸ್ತಿ, ಚೂಕ್ಕಂಡಹಳ್ಳಿ ಮತದಾನ ಕೇಂದ್ರದ ಬಳಿ ಪೊಲೀಸರ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಬಿಟ್ಟರೆ ಬೇರೆ ಯಾವೂದೇ ರೀತಿಯ ಘಟನೆ ಮತದಾನಕ್ಕೆ ಅಡ್ಡಿಯಾಗಿಲ್ಲ. ಪಟ್ಟಣದಲ್ಲಿ ಬೆಳಿಗ್ಗೆ ಮತದಾನದಲ್ಲಿ ಭಾಗವಹಿಸಲು ಉತ್ಸಾಹ ತೋರಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಬಿಸಲು ಎರುತ್ತಿದ್ದ ಹಾಗೆ ಜನತೆ ಮತದಾನ ಕೇಂದ್ರಗಳ ಕಡೆ ಬರಲು ಪ್ರಾರಂಭಿಸಿದರು. ಜೆಡಿಎಸ್ ಅಭ್ಯರ್ಥಿ ಕೇಶವ, ಶಾಸಕ ಮಂಜುನಾಥ್ಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ ಮಾಲೂರಿಗೆ ಭೇಟಿ ನೀಡಿ ಮತದಾನ ಕೇಂದ್ರಗಳ ಬಳಿ ಕಾರ್ಯಕರ್ತರೂಡನೆ ಚರ್ಚಿಸಿದರು. ಶಾಸಕ ಮಂಜುನಾಥ್ಗೌಡ ರವರ ಮತವು ಹೊಸಕೋಟೆಯ ಕೋಡಿಹಳ್ಳಿ ಯಲ್ಲಿ ಇದ್ದಿದ್ದರಿಂದ ಮಾಲೂರಿನಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ಸ್ಥಾಪಿಸಿದ 243 ಮತ ಕೇಂದ್ರಗಳಲ್ಲಿ 59 ಅತಿ ಸೂಕ್ಷ ಮತಗಟ್ಟೆಗಳಿದ್ದರೂ ಯಾವೂದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೂಬಸ್ತು ಸೂಕ್ತವಾಗಿ ಮಾಡಲಾಗಿತ್ತು.

ಗುಡಿಬಂಡೆಯಲ್ಲಿ ಶೇ.65 ಮತದಾನ
ಗುಡಿಬಂಡೆ: ಲೋಕ ಸಭೆ ಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆ ತಾಲೂಕಿನಾದ್ಯಂತ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಶೇ.65ರಷ್ಟು ಮತ ಚಲಾವಣೆಯಾಗಿದೆ. ಬಿಸಿಲಿನ ಝಳವನ್ನೂ ಲೆಕ್ಕಿಸದೆ ಪಟ್ಟಣ ಹಾಗೂ ಗ್ರಾಮಾಂತರದಲ್ಲಿ ಜನ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳ ಬಳಿ ಸಾಲಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸುಗಮ ಮತದಾನಕ್ಕಾಗಿ ತಾಲೂಕಿನಲ್ಲಿ ಒಟ್ಟು 57 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪಟ್ಟಣದ 208 ಸಂಖ್ಯೆಯ ಮತಗಟ್ಟೆಯ ಮತದಾರರಿಗೆ ನೀಡಿದ್ದ ಚೀಟಿಯಲ್ಲಿ ಮತದಾನ ಕೇಂದ್ರದ ಹೆಸರನ್ನು ಪಟ್ಟಣ ಪಂಚಾಯ್ತಿ ಎಂಬುದರ ಬದಲು ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಎಂದು ಮುದ್ರಿಸಿದ್ದ ಪರಿಣಾಮ ಸ್ವಲ್ಪಕಾಲ ಗೊಂದಲವುಂಟಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement