ನಗರ ಕಸ ವಿಲೇವಾರಿ; ಅಧಿಕಾರಿಗಳಿಗಿಲ್ಲ ವರಿ!
ಚಿಂತಾಮಣಿ: ಕಸ ವಿಲೇವಾರಿ ಮಾಡದೆ ನಗರಸಭೆ ಅಧಿಕಾರಿಗಳು ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಆಜಾದ್ ಚೌಕ್ ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯ ಹಿಂಭಾಗದಲ್ಲಿ ರಾಶಿ ರಾಶಿ ಕಸ ತುಂಬಿಕೊಂಡಿ. ಇದು ಜನರಿಗೆ ಹಾಗೂ ದೇಗುಲಕ್ಕೆ ಬರುವ ಭಕ್ತರಿಗೆ ತೀವ್ರ ಕಿರಿಕಿರಿಯುಂಟು ಮಾಡುತ್ತಿದೆ. ಕಳೆದ 1 ವಾರದಿಂದ ಕಸವನ್ನು ವಿಲೇವಾರಿ ಮಾಡದೆ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. “«ÚÈÚß½ ಚಿಂತಾಮಣಿ ಸ್ವಚ್ಛ _M}ÛÈÚß{‘ ಎಂಬ ಘೋಷಣೆ ನಾಮಫಲಕಕ್ಕೇ ಮಾತ್ರ ಸಿಮೀತವಾಗಿದೆ. ಕಸ ಬಿದ್ದಲ್ಲೇ ಬಿದ್ದು ಹಂದಿ, ನಾಯಿಗಳ ವಾಸಸ್ಥಾನವಾಗಿ ಪರಿಣಮಿಸಿದೆ. ಜನರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
ಜನರ ಆರೋಪ: ಕಸವನ್ನು ಕಂಟೇನರ್‌ಗಳ ಮೂಲಕ ನಗರವನ್ನು ಸ್ವಚ್ಛಗೊಳಿಸಲು ಸರ್ಕಾರ ನಗರಸಭೆಗೆ ಅನುದಾನ ನೀಡಿದೆ. ಹೀಗಿದ್ದೂ ನಗರಸಭೆ ಅಧಿಕಾರಿಗಳು ಕಸವನ್ನು ವಿಲೇವಾರಿ ಮಾಡಲು ವಿಫಲಗೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜನರ ಕುಂದು ಕೊರತೆಗಳ ಬಗ್ಗೆ ಸ್ಪಂದಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲಗೊಂಡಿದ್ದಾರೆಂದು ಅವರು ದೂರುತ್ತಿದ್ದಾರೆ.
ರೋಗಗಳು ಹರಡುವ ಭೀತಿ: ಎಲ್ಲೆಂದರಲ್ಲಿ ಕಸ ತುಂಬಿಕೊಂಡು ಗೊಬ್ಬುನಾತ ಬೀರಿ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ವಾಸಿಸುವ ಮನೆಗಳಲ್ಲಿ ಆಹಾರ ಪದಾರ್ಥಗಳ ಮೇಲೆ ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯ. ಇದು ಸಾಂಕ್ರಾಮಿಕ ರೋಗಗಳು ಹರಡು ಕಾರಣವಾಗುತ್ತದೆ ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ, ಕಸ ವಿಲೇವಾರಿಯನ್ನು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.