ಒಳಚರಂಡಿ ಕಾಮಗಾರಿ ತೆಗೆದಿದ್ದ ರಸ್ತೆ ಗುಂಡಿ ಮುಚ್ಚಲು ನಾಗರಿಕರ ಒತ್ತಾಯ
ಚಿಂತಾಮಣಿ: ಒಳಚರಂಡಿ ನೀರು ಮಿಶ್ರಣಗೊಂಡು ಕುಡಿಯುವ ನೀರಿನಲ್ಲಿ ಪೂರೈಕೆ ಆಗುತ್ತಿರುವುದನ್ನು ತಪ್ಪಿಸಲು ಅಗೆದ ಗುಂಡಿಯನ್ನು ಮತ್ತೆ ಮುಚ್ಚದೆ ಹಾಗೆ ಬಿಟ್ಟಿರುವುದರಿಂದ ಪಾದಾಚಾರಿಗಳಿಗೆ ಸುಗಮವಾಗಿ ಸಂಚರಿಸಲು ಆಗದೆ ತೊಂದರೆಯಾಗುತ್ತಿದೆ
ಎಂದು ಗೋಷಾಗಲ್ಲಿ ನಿವಾಸಿಗಳು ಆರೋಪಿಸಿದ್ದಾರೆ.ನಗರದ 22 ನೇ ವಾರ್ಡ್ನ ಗೋಷಾಗಲ್ಲಿ ರಸ್ತೆಯಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನಲ್ಲಿ ಒಳ ಚರಂಡಿ ನೀರು ಮಿಶ್ರಣಗೊಂಡು ನೀರು ಬಳಕೆಯಾಗದೆ ಇರುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಇವರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.ಪದೇ ಪದೇ ಕುಡಿಯುವ ನೀರಿನಲ್ಲಿ ಒಳ ಚರಂಡಿ ನೀರು ಬರುತ್ತಿರುವ ಬಗ್ಗೆ ಕಳೆದ 2 ವರ್ಷಗಳಿಂದ ನೀರಿನ ಪೈಪ್ ಹಾಗೂ ಒಳ ಚರಂಡಿ ಪೈಪ್ಗಳನ್ನು ಬೇರ್ಪಡಿಸದ ಕಾರಣ ಗೋಷಾಗಲ್ಲಿ ನಿವಾಸಿಗಳಿಗೆ ಕಲುಷಿತಗೊಂಡ ಮಲಮೂತ್ರ ನೀರು ದುರ್ವಾಸನೆಯಿಂದ ಬಡಿಯುತ್ತಿರುವ ನೀರನ್ನು ಉಪಯೋಗಿಸದೆ.ಬೇರೆ ಸ್ಥಳಗಳಿಂದ ನೀರು ತೆಗೆದುಕೊಂಡು ಕುಟುಂಬಗಳು ನಿರ್ವಹಣೆ ಮಾಡಬೇಕಾದ ದುಃಸ್ಥಿತಿ ಒದಗಿದೆ ಎಂದು ಆರೋಪಿಸಿದ್ದಾರೆ. ನಗರಸಭಾ ಅಧ್ಯಕ್ಷ ಜಿಯಾವುಲ್ಲಾ ರೆಹಮಾನ್ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.