ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕರಗಕ್ಕೂ ಮುನ್ನ ಕಾಮಗಾರಿ ಪೂರ್ಣ: ಮಂಜುನಾಥ್‌ಗೌಡ

Srinivasa Murthy VN
Updated On : 20 Apr 2014, 1:13 am

ಮಾಲೂರು: ಪಟ್ಟಣದಲ್ಲಿ ರು.5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕರಗ ಮಹೋತ್ಸವ ಆರಂಭಕ್ಕೂ ಮುನ್ನ ಮುಗಿಯುವ ಭರವಸೆ ಇದೆ ಎಂದು ಶಾಸಕ ಮಂಜುನಾಥ್‌ಗೌಡ ಹೇಳಿದರು.
ಪಟ್ಟಣದ ಎ.ಡಿ.ಕಾಲೊನಿಯಲ್ಲಿ ಪ್ರಗತಿಯಲ್ಲಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪಟ್ಟಣದಲ್ಲಿ ಕರಗ ಸಂಚರಿಸುವ ರಸ್ತೆಗಳ ಡಾಂಬರೀಕರಣ ಮಾಡಿದ ನಂತರ ಉಳಿದ ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡಲಾಗುವುದು. ಕಾಮಗಾರಿ ಗುಣಮಟ್ಟ ಕಡಿಮೆಯಾಗದಂತೆ ಅಯಾ ಪ್ರದೇಶಗಳ ಪುರಸಭೆ ಸದಸ್ಯರ ಜವಾಬ್ದಾರಿ ಹೊರಬೇಕು ಎಂದರು.
ಇದೆ ವೇಳೆ ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಮಾತನಾಡಿ, ಮುಂಬರುವ ಕರಗ ಮಹೋತ್ಸವ ಸುಗುಮವಾಗಿ ಸಾಗಲು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪಟ್ಟಣದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗೆ ಹರಿಸಲು ಹೊಸ ಕೊಳವೆ ಬಾವಿ ಕೊರೆಸುವುದರ ಜತೆಯಲ್ಲಿ ಹಳೆ ಕೊಳವೆ ಬಾವಿಗಳನ್ನು ಮತ್ತೆ ಅಳಕ್ಕೆ ಕೊರಿಸಿ ಮೋಟಾರ್ ಆಳವಡಿಸಲಾಗುತ್ತಿದೆ.
ಇದರಿಂದ ನೀರಿನ ಸಮಸ್ಯೆ ಬಹುಮಟ್ಟಿಗೆ ತಗ್ಗಿದ್ದು, ತಿಂಗಳೂಳಗೆ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು.
ಜೆಡಿಎಸ್ ಹಿರಿಯ ಮುಖಂಡ ನಂಜೇಗೌಡ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಅಭಿಯಂತರ ಮಂಜುನಾಥ್,ನಾಗರಾಜ್, ಪುರಸಭೆ ಸದಸ್ಯರಾದ ಮುರಳೀಧರ್, ರಾಮಮೂರ್ತಿ,ಅಲೂಮಂಜು, ಜಾಕಿರ್‌ಖಾನ್, ಆಂಜಿ, ನಂಜುಂಡಪ್ಪ,ಪಾಪಣ್ಣ, ಆರ್.ಕೆ.ಕೃಷ್ಣಪ್ಪ, ರಾಮಚಂದ್ರ, ಜುಟ್ಟು ಕೃಷ್ಣ, ವೇಣು,ಚೌಡರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement