ಚಿನ್ನ ಕೊಟ್ಟವರಿಗೆ ನೀರಿಲ್ಲ!
ಆರ್.ರಜನೀಕಾಂತ್
ಕೆಜಿಎಫ್: ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎರಡು ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಶುರವಾಗಿದೆ.
ಕ್ಷೇತ್ರದ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದರೆ, ಇನ್ನು ಕೆಲವು ಕೊಳವೆಬಾವಿಗಳು ದುರಸ್ತಿಗೆ ಬಂದಿವೆ. ಜನರು ಒಂದು ಬಿಂದಿಗೆ ನೀರಿಗೂ ಮೂರ್ನಾಲ್ಕು ಮೈಲಿ ಹೋಗಿ ತರಬೇಕಾಗಿದೆ. ಅಂತರ್ಜಲಮಟ್ಟ 1500 ಅಡಿಗಳಿಗೆ ಇಳಿದಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೆಸಿದ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ. ಇನ್ನೊಂದೆಡೆ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಪೈಕಿ ಕೆಲವು ಬಡಾವಣೆಗಳಲ್ಲಿ ಹಾಗೂ ಚಿನ್ನದ ಗಣಿ ಪ್ರದೇಶಗಳಲ್ಲಿ ಕಳೆದ ಮೂರು ತಿಂಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಪರ್ಯಾಸ ಎಂದರೆ, ಖಾಸಗಿ ಟ್ಯಾಂಕರ್‌ಗಳಲ್ಲಿ ಒಂದು ಕೊಡಕ್ಕೆ 2 ಇದ್ದದ್ದು 3ರಿಂದ 4ಕ್ಕೆ ಹೆಚ್ಚಳವಾಗಿದೆ. ಒಂದು ಟ್ಯಾಂಕ್ ನೀರಿಗೆ ಈ ಮೊದಲು 300 ಇತ್ತು. ಬೇಸಿಗೆಯ ಪರಿಣಾಮ ಈಗ ಒಂದು ಟ್ಯಾಂಕರ್ ನೀರಿಗೆ 500ರಿಂದ 600ವರೆಗೂ ಕೊಡಬೇಕಾದ ಪರಿಸ್ಥಿತಿ ಇದೆ. ಈ ಪ್ರಮಾಣದಲ್ಲಿ ಖಾಸಗಿಯವರು ಸುಲಿಗೆಗೆ ಇಳಿದಿದ್ದಾರೆ. ಆದರೆ, ಎಲ್ಲ ಗೊತ್ತಿದ್ದು ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅನಿವಾರ್ಯತೆಯಿಂದ ಜನರು ಕೂಡಾ ಖಾಸಗಿ ಟ್ಯಾಂಕರ್‌ಗಳು ವಿಧಿಸುವ ಬೆಲೆ ತೆತ್ತು ನೀರು ಖರೀದಿಸುತ್ತಿದ್ದಾರೆ.
ಕ್ಯಾರೇ ಅನ್ನದ ಅಧಿಕಾರಿಗಳು, ಜನಪ್ರತಿನಿಧಿಗಳು: ಜನ ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಿವಿಧ ಬಡಾವಣೆಯ ನಾಗರಿಕರು ನೀರನ್ನು ಪೂರೈಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರನ್ನೂ ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಮತ್ತೊಂದೆಡೆ ಅಧಿಕಾರಿಗಳು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಾರಣದಿಂದಾಗಿ ಜಾರಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರು ಕೇವಲ ಭರವಸೆ ಮಾತ್ರ ನೀಡುತ್ತಿದ್ದಾರೆಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.
ವಾಲ್ವ್‌ಮೆನ್‌ಗಳ ರಾಜಕೀಯ!
ದೇವರು ವರ ಕೊಟ್ಟರೂ ಪೂಜಾರಿ OæàsÚÆÄÇ’ ಅನ್ನುವ ಹಾಗೆ ವಾಲ್ವ್‌ಮೆನ್‌ಗಳು ರಾಜಕೀಯದಾಟ ಕೂಡಾ ಹೆಚ್ಚಾಗಿದೆ. ನೀರು ಸರಬರಾಜು ಮಂಡಳಿಯ ವಾಲ್ವ್‌ಮೆನ್‌ಗಳು ವಿವಿಧ ಬಡಾವಣೆಯಲ್ಲಿ ನಿಗದಿತ ಸಮಯಕ್ಕೆ ಕುಡಿಯುವ ನೀರನ್ನು ಬಿಡಬೇಕು. ಆದರೆ, ಅವರು ಮಾತ್ರ ನಿಗದಿತ ಸಮಯಕ್ಕೆ ಆಯಾ ಬಡಾವಣೆಗಳಿಗೆ ನೀರು ಬಿಡುವುದಿಲ್ಲ. ನೀರು ಬೇಕಿದ್ದರೆ ಒಂದು ವಾರ್ಡ್‌ನಲ್ಲಿ ಪ್ರತಿ ಮನೆಯಿಂದ 50 ಕೊಡಬೇಕು! ಆಗ ಮಾತ್ರ ನೀರು ನಲ್ಲಿಗಳಿಗೆ ಬರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರು ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.