ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಕರಣಗಳ ಮಾಹಿತಿ ಮೊಬೈಲ್ ಮೂಲಕ ಲಭ್ಯ

Srinivasa Murthy VN
Updated On : 3 Aug 2014, 11:54 am

ಕೋಲಾರ: ಇನ್ನು ಮುಂದೆ ರಾಜ್ಯದ ಎಲ್ಲಾ ನ್ಯಾಯಾಲಯ ಪ್ರಕರಣಗಳ ಮಾಹಿತಿ ವಕೀಲರಿಗೆ ಮೊಬೈಲ್ ಮೂಲಕ ತಿಳಿಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ, ಕೋಲಾರ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರೂ ಆಗಿರುವ ಜವಾದ್ ರಹೀಂ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನವೀಕರಿಸಿರುವ ಸಭಾಂಗಣ ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯದ ಪ್ರಕರಣಗಳ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಪ್ರಚುರಪಡಿಸುವ ವ್ಯವಸ್ಥೆ ಹೈಕೋರ್ಟಿನಲ್ಲಿ ಜಾರಿಗೆ ತರಲಾಗಿದ್ದು, ಸೆಪ್ಟಂಬರ್ ತಿಂಗಳಿಂದ ಈ ವ್ಯವಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದೆಂದು ಹೇಳಿದರು.ರಾಜ್ಯದ ಎಲ್ಲಾ ವಕೀಲರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಎಸ್‌ಎಂಎಸ್ ಮೂಲಕ ಪ್ರಕರಣಗಳ ಮಾಹಿತಿ ಪಡೆಯಬಹುದೆಂದ ಅವರು, ಸದ್ಯದಲ್ಲೇ ಇ.ಮೇಲ್ ಮೂಲಕವೂ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದೆಂದರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ರೇಣುಕಾ ಪ್ರಸಾದ್, 2ನೇ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ನ್ಯಾಯಾಧೀಶರಾದ ಕುಮಾರ್, ಶ್ರೀಕಾಂತ್, ಪ್ರಭಾವತಿ ಮನಗೂಳಿ, ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಆನಂದ್, ಸತೀಶ್ ಇದ್ದರು.

ಶ್ರಾವಣ ಮಾಸದ ವಿಶೇಷ ಪೂಜೆಗಳು
ಚಿಂತಾಮಣಿ: ತಾಲೂಕಿನ ಪ್ರಸಿದ್ಧ ಯಾತ್ರಸ್ಥಳ ಆಲಂಬಗಿರಿಯಲ್ಲಿ ಶ್ರಾವಣ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಆಲಂಬಗಿರಿಯ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.
ಶ್ರಾವಣ 2ನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು ಭಕ್ತಾಧಿಗಳು ಸಾಮೂಹಿಕಾವಾಗಿ ಮಾಡುವ ಲಕ್ಷ್ಮೀ ಪೂಜೆಯನ್ನು ವ್ಯವಸ್ಥೆ ಮಾಡಲಾಗಿದೆ.
 ಭಕ್ತರಿಗೆ ವಿಶೇಷ ದರ್ಶನ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಾಲಯಗಳ ನಗರಿ ಕೈವಾರದಲ್ಲಿ ಅಮರನಾರಾಯಣ ಸ್ವಾಮಿ, ಶ್ರೀ ಯೋಗಿ ನಾರೇಯಣ ಮಠದಲ್ಲಿ ಶ್ರಾವಣ ಶನಿವಾರ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement