ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಾಜಘಾತಕ ಶಕ್ತಿಗಳ ಮಟ್ಟಕ್ಕೆ ಬಿಗಿ ಕಾನೂನು ಅಗತ್ಯ

Srinivasa Murthy VN
Updated On : 3 Aug 2014, 11:57 am

ಚಿಂತಾಮಣಿ: ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿರುವ ವಿಶ್ವದಲ್ಲೇ ಅಗ್ರ ಸ್ಥಾನ ನೀಡಿದೆ. ಆದರೆ
ಹಲವರು ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಕಾನೂನು ಬಿಗಿಗೊಳಿಸಲು ಮುಂದಾಗಬೇಕೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ 3 ದಿನ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಸುಲಲಿತವಾಗಿ ನಡೆಯಲು ಸಹಕರಿಸಿದ ಎಲ್ಲಾ ಕಲಾವಿದ, ಪರಿಸರವಾದಿಗಳು, ವಿಚಾರವಂತರು ಮತ್ತಿತರರಿಗೆ ಅಭಿನಂದನೆ  ಸಲ್ಲಿಸಿದರು. ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಗ್ರಾಮೀಣ ಗಡಿಭಾಗದ ಹಳ್ಳಿಯಿಂದ ನಗರ ಪ್ರದೇಶದ ವರೆಗೂ ಕನ್ನಡ ಕಸ್ತೂರಿ ಸೊಗಡು ಬೀರಿದ ಪರಿಣಾಮ ಮುಂದೆ ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಬಿ. ಹನುಮಂತಪ್ಪ, ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ವೆಂಕಟರಮಣಾ ರೆಡ್ಡಿ, ಕನ್ನಡ ಅಶ್ವತ್ಥ, ಕರವೇ ಅಧ್ಯಕ್ಷ ಕೃಷ್ಣೋಜಿ ರಾವ್, ಕನ್ನಡ ಸೇನೆ ಅಧ್ಯಕ್ಷ ಕುಂಟಿಗಡ್ಡಿ ಲಕ್ಷ್ಮಣ್, ಯುವ ಮುಖಂಡ ವಿ.ಅಮರ್, ವಜೀರ್ ಅಹಮದ್ ಸೇರಿದಂತೆ ವಿವಿಧ ಶಾಲಾ ಮಕ್ಕಳು ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement