'ಯೋಜನೆಗಳ ಸದುಪಯೋಗವಾಗಲಿ'
ಬಂಗಾರಪೇಟೆ: ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸರ್ಕಾರಗಳು ಹಾಗೂ ಸ್ವಸಹಾಯ ಸಂಸ್ಥೆಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಬಳಸಿಕೊಂಡು ಸ್ವಾವಲಂಭಿ ಜೀವನ ನಡೆಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸಿ.ವಿ. ರಾಮನ್ ಹೇಳಿದರು.
ಪಟ್ಟಣದ ಕ್ಯಾಥೋಲಿಕ್ ಚರ್ಚ್ ಸಭಾಂಗಣದಲ್ಲಿ ಬೆಂಗಳೂರಿನ ಕ್ರಾಸ್ ಸಂಸ್ಥೆ, ಬಿಎಂಎಸ್ಎಸ್ಎಸ್ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಸ್ಟೆಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಮಕ್ಕು ಮಕ್ಕಳ ಇಲಾಖೆ ಹೆಣ್ಣು ಮಕ್ಕಳ ಹುಟ್ಟಿನಿಂದ ಸಾಯುವವರೆಗೂ ಅವರು ಸ್ವಾವಲಂಭಿ ಬದುಕಿಗೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ ಆದರೆ ಅವುಗಳನ್ನು ದಕ್ಕಿಸಿಕೊಳ್ಳಲು ಅರಿವು ಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಜಗದೀಶ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಕಸಿಯಬಾರದು ಅವರನ್ನು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ನೂಕಬಾರದು ಇದು ಕಾನೂನು ಅಪರಾಧವಾಗಿದೆ ಎಂದರು. ತೋಟಗಾರಿಗೆ ಸಹಾಯಕರ ನಿರ್ದೇಶಕ ನಾರಾಯಣಸ್ವಾಮಿ, ಕೃಷಿ ಇಲಾಖೆ ಸಂಪತ್, ಕ್ರಾಸ್ ಸಂಸ್ಥೆಯ ಸಂಯೋಜಕಿ ಜಾಯ್ಸ್ ಮಾತನಾಡಿದರು. ಜಿಲ್ಲಾ ಮಕ್ಕಳ ಅಧಿಕಾರಿ ಮಹೇಶ್ ಬಾಬು, ಜೆಸಂತಾ, ಚಿಕ್ಕವಲಗಮಾದಿ ಲಕ್ಷ್ಮಮ್ಮ, ರಾಧಾಮಣಿ,ಬೀರೇಶ್ ಇದ್ದರು.