ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

Srinivasa Murthy VN
Updated On : 11 Feb 2014, 12:09 pm

ಚಿಕ್ಕಬಳ್ಳಾಪುರ: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಜಾತಿನಿಂದನೆ ಮಾಡಿ ಹಲ್ಲೆಗೆ ಮುಂದಾದ ವ್ಯಕ್ತಿಯ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ದಸಂಸ ಮುಖಂಡರು ನಗರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸಬೇಕೆಂದು ಒತ್ತಾಯಿಸಿದರು. ದೂರುದಾರ ಎನ್.ಸಿ. ಮುನಿಯಪ್ಪ ಮಾತನಾಡಿ, ತಾಲೂಕಿನ ಅಂಗಟ್ಟ ಗ್ರಾಮದಲ್ಲಿ ತಮ್ಮ ಕುಟುಂಬಕ್ಕೆ ಸೇರಿದ 2.31 ಎಕರೆ ಭೂಮಿ ಪಕ್ಕದಲ್ಲಿರುವ ವಿ. ಲಕ್ಷ್ಮಯ್ಯನವರು ಕರಾಬಿನ ಹೆಸರಿನಲ್ಲಿ ಕಿರುಕುಳ ನೀಡಲು ಮುಂದಾದಾಗಿದ್ದಾರೆ. ಇದರಿಂದ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದು ಅಲ್ಲಿ ತಮ್ಮ ಪರ ತೀರ್ಪು ಬರುತ್ತಿರುವುದರಿಂದ ಆಕ್ರೋಶಗೊಂಡು ಜ.22 ರಂದು ನ್ಯಾಯಾಲಯದ ಆವರಣದಲ್ಲಿಯೇ ಜಾತಿ ನಿಂದನೆ ಮಾಡಿದರು. ಇದರ ಬಗ್ಗೆ ಅಂದು ನಗರ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಬದಲಿಗೆ ರಾಜಿಸಂಧಾನದ ಹೆಸರಿನಲ್ಲಿ ಕಾಲ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಿಂದ ಕಂಗಲಾದ ಪೊಲೀಸರು ಸಮಾಧಾನಪಡಿಸಿದರೂ ಧಿಕ್ಕಾರ ಕೂಗಿದ ಪ್ರತಿಭಟಾನಾಕಾರರು ಪಟ್ಟು ಸಡಿಸಲಿಲ್ಲ. ಕೊನೆಗೆ ಸ್ಥಳಕ್ಕೆ ನಗರ ಠಾಣೆಯ ಉಪ ನಿರೀಕ್ಷಕ ತಿಪ್ಪೇಸ್ವಾಮಿ ಬಂದು ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿ ಸಮಾಧಾನಪಡಿಸಿದರು. ದಸಂಸ ತಾಲೂಕು ಸಂಘಟನಾ ಸಂಚಾಲಕ ವೆಂಕಟೇಶ್, ಶ್ರೀರಾಮ್ , ನಾಗರಾಜ್, ಮುನಿಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement