ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೌದ್ಧಿಕ ಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ

Srinivasa Murthy VN
Updated On : 11 Feb 2014, 12:10 pm

ಮಾಲೂರು: ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ ಎಂದು ಉಪಾನ್ಯಾಸಕ ಆನಂದ್‌ಮೂರ್ತಿ ಹೇಳಿದರು.
ಪಟ್ಟಣದ ಕೋಲಾರ ರಸ್ತೆಯ ವಿವೇಕಾನಂದ ಬೆಸ್ಟ್ ಕಾನ್ವೆಂಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯ ಪುಸ್ತಕದಾರ್ಜನೆ ಜತೆಯಲ್ಲಿ ಇಂದಿನ ಸ್ವರ್ಧಾತ್ಮಕ ಯುಗಕ್ಕೆ ಬೇಕಾದ ವಿಜ್ಞಾನ ಪುಸ್ತಕಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳಬೇಕು ಎಂದರು.
ತಾಪಂ ಸದಸ್ಯ ಎಸ್.ವಿ. ಲೋಕೇಶ್ ಮಾತನಾಡಿ, ಇಂದಿನ ಐಟಿಬಿಟಿ ಪ್ರಂಪಚದಲ್ಲಿ ಮಕ್ಕಳಲ್ಲಿ ವಿಜ್ಞಾನದ ಅರಿವು ಅಗತ್ಯ. ಈ ನಿಟ್ಟಿನಲ್ಲಿ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿದೆ ಎಂದರು. ಸಂಸ್ಥೆಯ ವ್ಯವಸ್ಥಾಪಕ ಶೈಲೇಂದ್ರ ಕುಮಾರ್, ಸ್ನೇಹಿತ್, ಮುಖ್ಯೋಪಾಧ್ಯಾಯಿನಿ ಸುಧಾ, ಲಕ್ಕೂರು ನಾಗರಾಜ್, ಬಹೂದ್ದೂರ್ ಸಾಬ್ ಇದ್ದರು.
ಇಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಆಕರ್ಷಣೀನಿಯವಾಗಿತ್ತು. 3 ರಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ವಸ್ತುಗಳನ್ನು ತಯಾರಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಸೋಲಾರ್ ಮೂಲಕ ಅಡುಗೆ, ಅಪಘಾತ ತಪ್ಪಿಸಬಹುದಾದ ಆಟೋಮ್ಯಾಟಿಕ್ ರೈಲ್ವೇ ಗೇಟ್‌ಗಳು ಮಕ್ಕಳ ಜ್ಞಾನದ ಕೌಶಲ್ಯಕ್ಕೆ ಸಾಕ್ಷಿಯಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement