ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸವಲತ್ತು ಸದುಪಯೋಗವಾಗಲಿ

Srinivasa Murthy VN
Updated On : 11 Feb 2014, 12:10 pm

ಚಿಂತಾಮಣಿ: ಗ್ರಾಮೀಣ ಜನರಿಗೆ ಸಹಕಾರ ಸಂಘಗಳಿಂದ ದೊರೆಯುವ ವಿವಿಧ ಸೌಲತ್ತುಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಡಿಸಿಸಿ ಬ್ಯಾಂಕಿನ ನಿರ್ದೇಶಕ ಸತ್ಯನಾರಾಯಣಮಹೇಶ್ ಹೇಳಿದರು.
ತಾಲೂಕಿನ ಬುರುಡಗುಂಟೆ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಬುರುಡಗುಂಟೆ ವ್ಯವಸಾಯ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ಮನೆ ಮನೆಗೆ ಕುಡಿಯುವ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಗ್ರಾಮೀಣ ಜನಸಾಮಾನ್ಯರ ಅನುಕೂಲಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸುಲಭ ಸಾಲದ ಯೋಜನೆ ಸೇರಿದಂತೆ ವಿವಿಧ ಉಪಯೋಗಗಳನ್ನು ಪಡೆಯಲು ವ್ಯವಸಾಯ ಸಹಕಾರ ಸಂಘಗಳ ಅವಶ್ಯಕತೆ ಇರುವುದರಿಂದ ರೈತರು ಇದನ್ನು ಸದುಪಯೋಗ ಪಡಿಸಿಕೊಂಡು ಉಳಿಸಿ ಬೆಳೆಸಬೇಕೆಂದು ಹೇಳಿದರು.
ಗ್ರಾಪಂ ಸದಸ್ಯ ಭರತ್ ಕುಮಾರ್, ಚಾಂದ್ ಪಾಷ, ಸುಬ್ಬಣ್ಣ, ನಾರಾಯಣಸ್ವಾಮಿ,ನಕ್ಕಲ ಸುಬ್ಬರಾಯಪ್ಪ, ಕಾಳಿಂಗ ಮಾದಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement