ಇಂದಿನಿಂದ ಮಂಡಿಕಲ್ ಚೌಡೇಶ್ವರಿ ಜಾತ್ರೆ
ಮುಳಬಾಗಲು: ತಾಲೂಕಿನ ಮಂಡಿಕಲ್ ಗ್ರಾಮದ ಪ್ರಸನ್ನ ಚೌಡೇಶ್ವರಿ ದೇವಿಯ ರಥೋತ್ಸವ ಬುಧವಾರದಿಂದ ಅಂಕುರಾರ್ಪಣೆ, ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವುದು. ಕೊಲದೇವಿ, ಎಚ್.ಗೊಲ್ಲಹಳ್ಳಿ, ಹರಪನಾಯಕನಹಳ್ಳಿ, ವಮ್ಮಸಂದ್ರ, ದುಗ್ಗಸಂದ್ರ, ತಾವರೆಕೆರೆ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ಕುಂಕುಮಾರ್ಚನೆ ಹಾಗೂ ರಾತ್ರಿ ಉತ್ಸವ ಕಾರ್ಯಕ್ರಮಗಳು ಜರುಗುವುದು. ಶುಕ್ರವಾರದಂದು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ರಥೋತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ಅನ್ನದಾನ ಕಾರ್ಯಕ್ರಮವಿವಿಧ ಗ್ರಾಮಸ್ದರು ಸಾಂಪ್ರದಾಯದಂತೆ ಬಂಡಿಗಳಲ್ಲಿ ಅನ್ನ ಹೂತ್ತು ತರುವರು. ಕುಂಕುಮಾರ್ಚನೆ, ಪಾನಕಪೂಜೆಗಳು ನಡೆಯುವುದು. ಶನಿವಾರ ಚಿತ್ರಗೋಪುರೋತ್ಸವ, ಭಾನುವಾರ ಚಂಡಿಹೋಮ, ಸೋಮವಾರ ರುದ್ರಾಭಿಷೇಕ ಬೆಳಿಗ್ಗೆ ಅಗ್ನಿಗುಂಡೋತ್ಸವ ಕಾರ್ಯಕ್ರಮಗಳೊಂದಿಗೆ ಮಂಗಳವಾರ ಹರಪನಾಯಕನಹಳ್ಳಿ ಗ್ರಾಮಸ್ಥರು ವಸಂತೋತ್ಸವದೊಂದಿಗೆ ಕಾರ್ಯಕ್ರಮಗಳು ಪೂರ್ಣವಾಗುವುದೆಂದು ದೇವಾಲಯ ಸಮಿತಿ ಧರ್ಮದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಶ್ವತ ನೀರಾವರಿ ಅನುಷ್ಠಾನಕ್ಕೆ ಒಕ್ಕೊರಲ ಆಗ್ರಹ
ಶಿಡ್ಲಘಟ್ಟ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಈ ಬಾಗದ ರೇಷ್ಮೆ ಬೆಳೆಗಾರರ ಹಿತ ಕಾಪಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ ಮುಂಬರುವ ಲೋಕಸಭೆ ಚುನಾವಣೆಯನ್ನು ಕೋಲಾರ-ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಜನತೆ ಬಹಿಷ್ಕರಿಸಬೇಕು ಎಂದು ರೇಷ್ಮೆ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬಜೆಟ್ ಪೂರ್ವ ಸಲಹೆ ಸಭೆಯಲ್ಲಿ ರೈತ ಮುಖಂಡರಿಂದ ಅಬಿಪ್ರಾಯ ವ್ಯಕ್ತವಾಯಿತು.ಯಾವುದೇ ಸರ್ಕಾರಗಳು ಬಂದರೂ ಈ ಭಾಗದ ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ, ರೇಷ್ಮೆ ಉದ್ಯಮ ಸೇರಿದಂತೆ ಇಂದು ರೈತರು ಉಳಿಯಬೇಕಾದರೆ ಮುಖ್ಯವಾಗಿ ನೀರು ಬೇಕು, ರೇಷ್ಮೆ ಇಲಾಖೆಯಿಂದ ಕೇವಲ ಪರಿಶಿಷ್ಟಜಾತಿ, ಪಂಗಡಗಳಿಗೆ ಮಾತ್ರ ಸಹಾಯಧನ ನೀಡಲಾಗುತ್ತಿದ್ದು ಎಲ್ಲಾ ಜನಾಂಗಗಳಿಗೂ ಸಹಾಯಧನ ನೀಡಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾಯಿತು. ಹಿತ್ತಲಹಳ್ಳಿ ರಮೇಶ್ ಮಾತನಾಡಿ, ಇಲಾಖೆಯ ಕೆಲ ಅಧಿಕಾರಿಗಳು ದೊಡ್ಡ ರೈತರೊಂದಿಗೆ ಶಾಮೀಲಾಗುವುದರೊಂದಿಗೆ ಸುಳ್ಳುವರದಿ ನೀಡಿ ಕೆಲವರಿಗೆ ಮಾತ್ರ ಕೃಷಿ ಪಂಡಿತ ಪ್ರಶಸ್ತಿಗಳು ಸಿಗುವಂತೆ ನೋಡಿಕೊಂಡಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯುವುದರೊಂದಿಗೆ ಸವಲತ್ತುಗಳನ್ನು ಎಲ್ಲರಿಗೂ ಸಿಗುವಂತೆ ಕರ್ತವ್ಯ ನಿರ್ವಹಿಸಬೇಕೆಂದರು.