ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಗೆ ವಿದರ್ಭ ಮಾದರಿ ವಿಶೇಷ ಪ್ಯಾಕೇಜ್ ನೀಡಿ

Srinivasa Murthy VN
Updated On : 12 Feb 2014, 12:54 pm

ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ಡಾ. ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಹಾಗೂ ವಿದರ್ಭ ಮಾದರಿಯಲ್ಲಿ ಕೋಲಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬರಪೀಡಿತ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮುಖಂಡರಾದ ಮಾರಾಂಡಹಳ್ಳಿ ಶಿವಾರೆಡ್ಡಿ ಮಾತನಾಡಿ,ಕೆ.ಸಿ. ರೆಡ್ಡಿ ಮತ್ತು ದೇಸಾಯಿರವರನ್ನು ಸಮಿತಿಯಿಂದ ನೀರಾವರಿ ಸಲಹಾ ಸಮಿತಿಯಿಂದ ತೆಗೆಯಬೇಕು. ಪರಮಶಿವಯ್ಯನವರ ಯೋಜನೆಗೆ ಸಂಬಂಧಿಸಿದಂತಿರುವ ಜನರಲ್ಲಿ ತಪ್ಪು ಗ್ರಹಿಕೆ ಮತ್ತು ಸಮಸ್ಯೆಗಳನ್ನು ದೂರ ಮಾಡಿ ಅನುಷ್ಠಾನಕ್ಕೆ ಸರ್ಕಾರದಿಂದ ರಾಜಕೀಯ ಹಿತಾಸಕ್ತಿ ತೋರಬೇಕು.  ವೈಜ್ಞಾನಿಕ ಮೂಲಗಳಿಂದಾದರೂ ನೀರು ಸಿಗುವಂತಾಗಬೇಕು, ಬರೀ ಎರಗೋಳು ಯೋಜನೆಯಲ್ಲಿ ಕೋಟ್ಯಂತರ ರು. ಹಣ ಲೂಟಿ ಮಾಡಿದ ರೀತಿ ಎತ್ತಿನ ಹೊಳೆಗೆ ಶಂಕುಸ್ಥಾಪನೆ ಮಾಡಿ ಚುನಾವಣೆಯಲ್ಲಿ ಓಟಿ ಗೋಸ್ಕರ ಜನರ ಕಣ್ಣೊರೆಸಿ ನಾಟಕವಾಡಿ ಶಂಕು ಸ್ಥಾಪನೆ ಹೆಸರಿನಲ್ಲಿ ಹಣ ಲೂಟಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಸಾಲ ವಸೂಲಿ ಹೆಸರಿನಲ್ಲಿ ಬ್ಯಾಂಕುಗಳು ರೈತರಿಗೆ ಸುಸ್ತೀದಾರರೆಂದು ಅವಮಾನ ಮಾಡುವುದನ್ನು ನಿಲ್ಲಿಸಬೇಕು, ಸಾಲ ವಸೂಲಾತಿ 2ವರ್ಷ ಮುಂದೂಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ 12ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ನೀಡಬೇಕು, ನರಸಾಪುರ ಮತ್ತು ವೇಮಗಲ್ ಪ್ರದೇಶದ ಕೈಗಾರಿಕೆಗಳಲ್ಲಿ ಭೂಮಿ ನೀಡಿರುವ ರೈತರಿಗೆ ಮತ್ತು ಸ್ಥಳೀಯ ಯುವಕರಿಗೆ ಶೇ. 60 ಉದ್ಯೋಗ ಮೀಸಲಿಡಬೇಕೆಂದು ಆಗ್ರಹಿಸಿದರು. ಮುಖಂಡರಾದ ಹುಲ್ಕೂರು ಹರಿಕುಮಾರ್, ಹೂಹಳ್ಳಿ ನಾಗರಾಜ್, ಶೆಟ್ಟಿಗಾನಹಳ್ಳಿ ರಾಜೇಶ್, ರಂಜಿತ್‌ಕುಮಾರ್, ತೆರನಹಳ್ಳಿ ಆಂಜಿನಪ್ಪ, ಭಕ್ತನ್, ಕಾರಿ ವಿಶ್ವನಾಥ್, ಮರಗಲ್ ಶ್ರೀನಿವಾಸ್, ದಾಸರಹಳ್ಳಿ ವೆಂಕಟೇಶ್, ಕೆಂಬೋಡಿ ಕೃಷ್ಣೇಗೌಡ, ನಿಲ್ಟೂರು ರಮೇಶ್, ನೀಲಕಂಠಪುರ ಮುನೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement