ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೊಯ್ಲಿ ಮಣಿಸಲು ಬಿಜೆಪಿ ಭಾರಿ ಸಿದ್ಧತೆ

Srinivasa Murthy VN
Updated On : 12 Feb 2014, 12:54 pm

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಮೂಡಿರುವ ಗೊಂದಲ ಈಗ ನೆರೆಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ವಿಸ್ತರಿಸಿದೆ.
ಈ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ವಿರುದ್ಧ ಆಡಳಿತ ವಿರೋಧಿ ಅಲೆ ಪ್ರಬಲವಾಗಿ ಬೀಸುತ್ತಿದೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಸಾಮ್ರಾಜ್ಯ ಉರುಳಿಸುವುದಕ್ಕೆ ಭಾರೀ ಸಿದ್ಧತೆ ನಡೆಸಿದ್ದ ಬಿಜೆಪಿಯಲ್ಲೇ ಈಗ ಟಿಕೆಟ್ ಹಂಚಿಕೆ ವಿವಾದ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡುತ್ತೇವೆ ಎಂಬ ಭರವಸೆ ಆಧಾರದ ಮೇಲೆ ಸ್ವತಂತ್ರವಾಗಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ವೈ. ನಾರಾಯಣಸ್ವಾಮಿ ಅವರನ್ನು ಬಿಜೆಪಿಗೆ ಕರೆ ತರಲಾಗಿತ್ತು. ಆದರೆ ಈಗ ಮಾಜಿ ಸಚಿವ ಬಚ್ಚೇಗೌಡ ಸೇರಿದಂತೆ ಇನ್ನು ಕೆಲಹೆಸರುಗಳು ಕೇಳಿ ಬರಲಾರಂಭಿಸಿವೆ.ಹೀಗಾಗಿ ಚಿಕ್ಕಬಳ್ಳಾಪುರ ಟಿಕೆಟ್ ಪಡೆಯುವುದಕ್ಕೂ ಬಿಜೆಪಿಯಲ್ಲಿ ಪ್ರಯತ್ನ ಆರಂಭವಾಗಿದೆ. ಹೊಸಕೋಟೆಯಲ್ಲಿ ಸೋತ ನಂತರ ಹೆಚ್ಚು ಕಡಿಮೆ ಬಿಜೆಪಿ ತೊರೆವ ಚಿಂತನೆ ನಡೆಸಿದ್ದ ಮಾಜಿ ಸಚಿವ ಬಚ್ಚೇಗೌಡ ಈಗ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವುದಕ್ಕೆ ಒಲವು ತೋರಿದ್ದಾರೆ.

ಹಾಸ್ಟೆಲ್‌ಗಳಿಗೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಭೇಟಿ
ಮುಳಬಾಗಲು: ತಾಲೂಕಿನ ನಂಗಲಿ, ಎನ್.ವಡ್ಡಹಳ್ಳಿ, ಪಟ್ಟಣದ ಮೆಟ್ರಿಕ್ ಪದವಿ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಕೋಲಾರ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ.ನಾಗರಾಜ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಬಿಸಿಎಂ ಇಲಾಖೆಯ ಅಧಿಕಾರಿಗಳು ದಿಢೀರ್ ಭೇಟಿ  ನೀಡಿ ಪರಿಶೀಲನೆ ನಡೆಸಿದರು.  ವಿದ್ಯಾರ್ಥಿ ನಿಲಯದಲ್ಲಿ ಹಲವು ನೂನ್ಯತೆಗಳ ಬಗ್ಗೆ ಹಾಗೂ ಹಾಜರಾತಿ ಸಂಖ್ಯೆ ಕಡಿಮೆ ಇದ್ದರೂ ಪೂರ್ತಿ ಹಾಜರಾತಿ ನೀಡಿರುವುದು ಕಂಡು ಸ್ಥಾಯಿ ಸಮಿತಿ ಅಧ್ಯಕ್ಷರು ನಿಲಯದ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.
ಭಾನುವಾರದಂದು ಶೇ. 80ರಷ್ಟು ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಿದ್ದರೂ ಪೂರ್ಣ ಹಾಜರಾತಿ ನೀಡಿ, ಅಂದು ನೀಡಬೇಕಾದ ವಿದ್ಯಾರ್ಥಿಗಳ ಸವಲತ್ತು ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂತು. ಜಿಪಂ ಸದಸ್ಯ ಶ್ರೀನಿವಾಸ್ ಮತ್ತತಿರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement