ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೊಳಚೆ ಪ್ರದೇಶವೆಂದು ಘೋಷಿಸಿ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಧರಣಿ

Srinivasa Murthy VN
Updated On : 17 Feb 2014, 12:09 pm

ಕೆಜಿಎಫ್:  ಸರ್ಕಾರ ಬಿಜಿಎಂಎಲ್ ವ್ಯಾಪ್ತಿಯ ವಾಸ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿ  ಮೂಲಭೂತ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ದವಿರುವುದಾಗಿ ಕರ್ನಾಟಕ ಕ್ರಿಶ್ಚಿಯನ್ ಪ್ರೊಗ್ರೆಸಿವ್ ಫ್ರಂಟ್‌ನ ಸಂಚಾಲಕ ದಾಸ್ ಚಿನ್ನಸವರಿ ನಗರದ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹೇಳಿದರು.
ಅದೇ ರೀತಿ ಕೇಂದ್ರ ಸರ್ಕಾರ ಬಹುದಿನಗಳ ಬೇಡಿಕೆ ಕ್ರೈಸ್ತ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಅಗತ್ಯ ಕಾನೂನು ಹಾಗೂ ರಾಷ್ಟ್ರಪತಿಗಳ ವಿದೇಯಕ 1950ನ ಆದೇಶವನ್ನು ಮಾರ್ಪಾಡುಮಾಡಿ ಪರಿಶಿಷ್ಟ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಕೆಜಿಎಫ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ವೇಳೆ ಕ್ರೈಸ್ತ ಸಮುದಾಯದ ಹಲವು ಮುಖಂಡರು ಮಾತನಾಡಿ 2001ರಿಂದ ಬಿಜಿಎಂಎಲ್ ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಬಿಜಿಎಂಎಲ್ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರಿಗೆ ಶಾಶ್ವತ ಪರಿಹಾರ ಹಾಗೂ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕುಟುಂಬ ವರ್ಗದವರು ವಾಸಿಸುತ್ತಿದ್ದು ಇವರಿಗೆ ಸರ್ಕಾರ ಮನೆಗಳನ್ನು ಸ್ವಂತವಾಗಿ ನೀಡುವ ಯೋಜನೆಗಳನ್ನು ಈವರೆಗೂ ಜಾರಿಗೊಳಿಸಿಲ್ಲ ಎಂದು ದೂರಿದರು.
ಮಾಜಿ ಶಾಸಕ ಎಂ.ಭಕ್ತವತ್ಸಲಂ, ಎಸ್. ರಾಜೇಂದ್ರನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಗರದ ವಿವಿಧ ಚರ್ಚ್‌ಗಳ ಫಾದರ್ ಸೇರಿದಂತೆ ರೆವರೆಂಟ್ ಫ್ರಾಂಕ್ ತೋಮಯಾರ್, ಡಾ.ಗಾಡ್‌ಬರ್ಗ್‌ಜಾನ್, ರೇವರೆಂಟ್‌ಗಳಾದ ಜೆ.ಸ್ಯಾಮುವೆಲ್, ರಾಬಿನ್‌ಮಾರ್ಶಲ್, ಡಾ.ಮೊನೋವಾನಿಕಲ್ಸನ್, ಜಾನ್ ಪರಿಮಳಂ, ಪ್ರಾನ್ಸಿಸ್ ಜೆವಿಯರ್, ಜೆ.ಜಾನ್‌ಪೀಟರ್, ಸಿಸ್ಟರ್ ಸೆಲೆಸ್ಟಿನಾ ಸೇರಿದಂತೆ ಕ್ರೈಸ್ಥ ಮುಖಂಡರು ಕ್ರೈಸ್ತ ಧರ್ಮದ ಪ್ರಮುಖರು ನಾಗರಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement