ಡಿಸಿ ಪ್ರವಾಸ ಕಾರ್ಯಕ್ರಮ
ಕೋಲಾರ: ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಇವರ 2014 ನೇ ಫೆಬ್ರವರಿ ಮಾಹೆಯ ಎರಡನೆಯ ಪಾಕ್ಷಿಕ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ನಿಗದಿಪಡಿಸಲಾಗಿದೆ.
ಫೆ.17 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಕಲ್ಲೂರು, ಜೆ.ತಿಮ್ಮಸಂದ್ರ ಕಂದಾಯ ವೃತ್ತಗಳಲ್ಲಿ ಮತ್ತು ಮಧ್ಯಾಹ್ನ 2 ಗಂಟೆಗೆ ನಂಬಿಹಳ್ಳಿ ಕಂದಾಯ ವೃತ್ತ, ಶ್ರೀನಿವಾಸಪುರ ಪಟ್ಟಣದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ.18 ರಂದು ಕೇಂದ್ರ ಸ್ಥಾನದಲ್ಲಿದ್ದು ಪ್ರಸ್ತುತ ಕೆಲಸ ನಿರ್ವಹಿಸುವರು. ಬೆ-11ಗಂಟೆಗೆ ಎನ್.ಹೆಚ್.4 ಭೂ ಸ್ವಾಧೀನ, ಎಂ.ಎ.ಜಿ,ಎಲ್.ಆರ್.ಎಫ್,ಕೆ.ಐ.ಎ.ಡಿ.ಬಿ ಪ್ರಕರಣಗಳ ವಿಚಾರಣೆ ನಡೆಸುವರು. ಮ.3 ಗಂಟೆಗೆ ಅಂತರ್ಜಲ ಪ್ರಾಧಿಕಾರದ ಸಭೆ ನಡೆಸುವರು.
ಫೆ-19 ರಂದು ಕೇಂದ್ರ ಸ್ಥಾನದಲ್ಲಿ ಕೆಲಸ . ಬೆ.11 ಗಂಟೆಗೆ ನೆಹರೂ ಯುವ ಕೇಂದ್ರದ ಸಲಹಾ ಸಮಿತಿ ಸಭೆ ನಡೆಸುವರು. ಮ-3 ಗಂಟೆಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು.
ಫೆ-20 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು. ಫೆ-21ರಂದು ಬೆ-10 ಗಂಟೆಗೆ ಶ್ರೀನಿವಾಸಪುರ ತಾಲೂಕು ಕಸಬಾ ಹೋಬಳಿ, ಚಲ್ದಿಗಾನಹಳ್ಳಿ, ಹೆಬ್ಬಟ ಗ್ರಾಮದಲ್ಲಿ ಮತ್ತು ಮ-2 ಗಂಟೆಗೆ ಪಾಳ್ಯ, ಕೊಡಿಚೆರವು ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ-22 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು.ಫೆ-23 ಶ್ರೀನಿವಾಸಪುರದಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳವರ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಫೆ-24 ರಂದು ಬೆ-10 ಗಂಟೆಗೆ ಶ್ರೀನಿವಾಸಪುರ ತಾಲೂಕು ಕಸಬಾ ಹೋಬಳಿಯ ತೆರ್ನಹಳ್ಳಿ, ಗಾಂಡ್ಲಹಳ್ಳಿ ಗ್ರಾಮದಲ್ಲಿ ಮತ್ತು ಮ-2 ಗಂಟೆಗೆ ವೈ. ಹೊಸಕೋಟೆ, ದಳಸನೂರು ಗ್ರಾಮದಲ್ಲಿ ಕಂದಾಯ ಅದಾಲತ್ ಸಭೆ ನಡೆಸುವರು.
ಫೆ-25 ರಂದು ಕೇಂದ್ರ ಸ್ಥಾನದಲ್ಲಿರುತ್ತಾರೆ. ಬೆ-11ಗಂಟೆಗೆ ಎನ್.ಹೆಚ್.4 ಭೂ ಸ್ವಾಧೀನ, ಎಂ.ಎ.ಜಿ,ಎಲ್.ಆರ್.ಎಫ್. ಪ್ರಕರಣಗಳ ವಿಚಾರಣೆ ನಡೆಸುವರು. 12 ಗಂಟೆಗೆ ರಾಷ್ಟ್ರೀಯ ಹೆದ್ದಾರಿ -4 ನಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸುವರು. ಮ.3 ಗಂಟೆಗೆ ಸಪಾಯಿ ಕರ್ಮಚಾರಿ ಪುನರ್ವಸತಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಸಭೆ ನಡೆಸುವರು.
ಫೆ.26 ರಂದು ಬೆ-11 ಗಂಟೆಗೆ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ರಂಗಮಂದಿರದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಸಂಬಂಧ ತರಬೇತಿ ಸಭೆ ನಡೆಸುವರು. ಮ-3 ಗಂಟೆಗೆ ಅಪೀಲು ಪ್ರಕರಣಗಳ ವಿಚಾರಣೆ ನಡೆಸುವರು. ಫೆ.28 ರಂದು ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವರು.