ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೂಲ ಸೌಕರ್ಯಕ್ಕೆ ಒತ್ತಾಯ

Srinivasa Murthy VN
Updated On : 17 Feb 2014, 12:11 pm

ಕೋಲಾರ: ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಎ.ಬಿ.ವಿ.ಪಿ ರಾಜ್ಯಾದ್ಯಂತ ನೀಡಿದ್ದ, ಪ್ರತಿಭಟನೆ ಕರೆಯಮೇರೆಗೆ ನಗರದಲ್ಲಿ ಅಪರ ಜಿಲ್ಲಾಧಿಕಾರಿ ನವೀನ್‌ರಾಜು ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸರ್ಕಾರಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಕಾಲೇಜುಗಳ ಮೂಲ ಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು, ತಕ್ಷಣವೇ ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಕಾಯಂ ಉಪನ್ಯಾಸ ಹುದ್ದೆಗಳಿಗೆ ನೇಮಕ ಮಾಡಬೇಕು.ರಾಜ್ಯದಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಅ ರೆಕಾಲಿಕ ಉಪನ್ಯಾಸಕರಿಗೆ ವೇತನ ವೇತನವನ್ನು ಹೆಚ್ಚಿಸಬೇಕು, ಅರೆಕಾಲಿಕ ಉಪನ್ಯಾಸಕರಿಗೆ ಪ್ರತಿ ತಿಂಗಳು ವೇತನ ನೀಡಬೇಕು, ಹೊಸ ವಿಶ್ವವಿದ್ಯಾಲಯಗಳಿಗೆ ಮೂಲ ಸೌಕರ್ಯಕ್ಕಾಗಿ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಎ.ಬಿ.ವಿ.ಪಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಾಗರಾಜ್, ವಿನೋದ್, ಸುಮನ್, ವೆಂಕಟೇಶ್, ಸುನಿಲ್‌ಕುಮಾರ್ ಇದ್ದರು.

ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ
ಕೋಲಾರ: ಕಾಲು ಬಾಯಿ ಜ್ವರದಿಂದ ತತ್ತರಿಸುತ್ತಿರುವ ರಾಸುಗಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ವಿ. ಹರೀಶ್ ಸಲಹೆ ನೀಡಿದರು.
ತಾಲೂಕಿನ ವಡಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಲಸಿಕೆ ಹಾಕಿಸುವುದರಿಂದ ಎರಡ್ಮೂರು ದಿನಗಳು ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆಂದು ಲಸಿಕೆ ಹಾಕಿಸದೆ ಇದ್ದರೆ ಮುಂದಿನ ದಿನಗಳಲ್ಲಿ ರೈತರು ರಾಸುಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿಗಳು ಎದುರಾಗಿವೆ. ಆದ್ದರಿಂದ ರಾಸುಗಳಿಗೆ ಯಾವುದೇ ಆತಂಕಕ್ಕೆ ಒಳಗಾಗದೇ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಪಶು ಫಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವರಾಂ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಹೆಚ್ಚು ಹಸುಗಳು ಮೃತಪಟ್ಟಿರುವ ಕಾರಣದಿಂದಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ ಸರ್ಕಾರ ಈ ನಷ್ಟವನ್ನು ತುಂಬಿಕೊಡುತ್ತಿದೆ ಎಂದರು.
ಜಿಲ್ಲೆಯಲ್ಲಿ 3098 ರಾಸುಗಳು ಮೃತಪಟ್ಟಿದ್ದು ಸರ್ಕಾರದಿಂದ ಪರಿಹಾರ ದನ ನೀಡಲಾಗಿದೆ, ಬಾಕಿ ಉಳಿದಿರುವ 400 ರಾಸುಗಳಿಗೆ ಕೂಡಲೇ ಪರಿಹಾರ ದನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಎಸ್.ರಾಮೇಗೌಡ,ಎನ್.ಜಿ. ಬ್ಯಾಟಪ್ಪ, ಹೆಗಡೆ, ಚನ್ನಕೇಶವ, ಉಪ ವ್ಯವಸ್ಥಾಪಕ ಶ್ರೀನಿವಾಸಗೌಡ, ವೈದ್ಯರಾದ ನಾಗಣ್ಣ, ಅಪ್ಜಲ್‌ಪಾಷ, ಶಫಿ, ಪ್ರಭಾಕರ್, ಮಧು, ಚಂದ್ರಶೇಖರ ರೆಡ್ಡಿ ಇದ್ದರು.

ಎಟಿಎಂಗಳಲ್ಲಿ ನಕಲಿ ನೋಟುಗಳ ಹಾವಳಿ, ಜನರ ಕಳವಳ
ಬಂಗಾರಪೇಟೆ: ಎಟಿಎಂಗಳಲ್ಲಿ ಇತ್ತೀಚೆಗೆ ನಕಲಿ ನೋಟುಗಳ ಹಾವಳಿ ಹದ್ದುಮೀರಿ ಚಲಾವಣೆಯಾಗುತ್ತಿದ್ದರೂ ಬ್ಯಾಂಕುಗಳು ಮಾತ್ರ ಅದನ್ನು ನಿಯಂತ್ರಿಸದೆ ಮೌನಕ್ಕೆ ಶರಣಾಗಿರುವುದನ್ನು ಖಂಡಿಸಿ ಭಾನುವಾರ ಚಲವಾದಿ ಸಂಘಟನೆ ಮುಖಂಡ ನಾರಾಣಯಸ್ವಾಮಿ ಪ್ರತಿಭಟನೆ ನಡೆಸಿದರು.
ತಿಂಗಳ ಹಿಂದಷ್ಟೆ ಪಟ್ಟಣದ ಪಾನಿ ಪೂರಿ ವ್ಯಾಪಾರಿ ರಮೇಶ್ ಎಂಬುವರು ಐಸಿಐಸಿಐ ಬ್ಯಾಂಕಿನ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಒಂದು ಸಾವಿರ ಮುಖ ಬೆಲೆಯ ನೋಟು ನಕಲಿ ಸಿಕ್ಕಿತು. ಈಗ ಚಲವಾದಿ ಸಂಘಟನೆ ಮುಖಂಡ ನಾರಾಯಣಸ್ವಾಮಿ ಭಾನುವಾರ ಲಕ್ಷ್ಮೀವಿಲಾಸ ಬ್ಯಾಂಕಿನ ಎಟಿಎಂನಲ್ಲಿ 10 ಸಾವಿರ ಡ್ರಾ ಮಾಡಿದ್ದು ಅದರಲ್ಲಿ 500 ಮುಖಬೆಲೆ 5 ನೋಟುಗಳು ನಕಲಿ ನೋಟುಗಳು ದೊರಕಿದೆ. ನೋಟುಗಳನ್ನು ಗಮನಿಸುತ್ತಿದ್ದಂತೆ ಅನುಮಾನಗೊಂಡು ಪರಿಶೀಲಿಸಿದಾಗ ನಕಲಿ ಎಂಬುದು ಖಾತರಿಯಾಗುತ್ತಿದ್ದಂತೆ ಬ್ಯಾಂಕುಗಳು ನಕಲಿ ನೋಟುಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕಿತ್ತು. ಆದರೆ ಬ್ಯಾಂಕುಗಳ ಎಟಿಎಂಗಳಲ್ಲೇ ನಕಲಿ ನೋಟುಗಳು ಚಲಾವಣೆಯಾಗುತ್ತಿರುವುದನ್ನು ನೋಡಿದರೆ ಬ್ಯಾಂಕುಗಳು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿಢೀರನೆ ಬ್ಯಾಂಕಿನ ಕಾರ್ಯವೈಖರಿ ವಿರುದ್ಧ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ವೃತ್ತ ನಿರೀಕ್ಷಕ ವೆಂಕಟಾಚಲಪತಿ ಬಂದು ಸೋಮವಾರ ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಜಿ.ಇ.ರಾಮೇಗೌಡರ 42 ನೇ ಹುಟ್ಟುಹಬ್ಬ
ಮಾಲೂರು: ಜಿಪಂ ಮಾಜಿ ಸದಸ್ಯ ಹಾಗೂ ಜಿ.ಇ.ರಾಮೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಜಿ.ಇ.ರಾಮೇಗೌಡರ 42 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಭಾನುವಾರ ಅರ್ಥಪೂರ್ಣವಾಗಿ ಆಚರಿಸಿದರು. ಪಟ್ಟಣದ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೊಜೆ ಸಲ್ಲಿಸಿದ ಅಭಿಮಾನಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಅಭಿಮಾನಿ ಸಂಘದ ಅಧ್ಯಕ್ಷ ದಿನೇಶ್‌ಗೌಡ,ಸಂದೀಪ್,ಮೋಹನ್,ಟಸ್ಕರ್ ಬಾಬು, ಬಾಲೂ, ಶಿವು, ಹರೀಶ್, ಕರಿಯಪ್ಪ,ರಮೇಶ್,ಗೋಪಾಲ್,ಸುಮಂತ್ ಇದ್ದರು.

ವಿಶ್ವ ಕುಂದಾಪುರ ಕೃತಿ ಬಿಡುಗಡೆ ಇಂದು
ಕೋಲಾರ: ಲೇಖಕ,ಪತ್ರಕರ್ತ ವಿಶ್ವ ಕುಂದಾಪುರ ಇವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಕೃತಿಯು ಎಸ್‌ಎಫ್‌ಐ 13ನೇ ರಾಜ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ರಾಜ್ಯ ವಿದ್ಯಾರ್ಥಿ ಮುಖಂಡ ಎನ್. ಅನಂತ ನಾಯ್ಕ್, ಹುಳ್ಳಿ ಉಮೇಶ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಂ.ವಿ.ನಾರಾಯಣ ಸ್ವಾಮಿ, ಜೆಎಂಎಸ್ ರಾಜ್ಯಾಧ್ಯಕ್ಷೆ ವಿ.ಗೀತಾ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement