ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚೌಡರೆಡ್ಡಿಗೆ ಅಭಿನಂದನೆ 12ಕ್ಕೆ

Srinivasa Murthy VN
Updated On : 10 Jul 2014, 1:09 am

ಕನ್ನಡಪ್ರಭ ವಾರ್ತೆ, ಕೋಲಾರ, ಜು.9
ಆಗ್ನೇಯ ಪದವೀದರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಶ್ರೀನಿವಾಸಪುರ ತಾಲೂಕಿನ ಆರ್ .ಚೌಡರೆಡ್ಡಿ ಅವರಿಗೆ ಜಿಲ್ಲಾ ಪದವೀಧರರ ವೇದಿಕೆಯಿಂದ ಜು.12ರಂದು ಅಭಿನಂದನಾ ಸಮಾರಂಭವನ್ನು ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಸ್. ಮುನಿಯಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪದವೀಧರರ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಕ್ರಿಯಾಶೀಲತೆಯಿಂದ ಕೆಲಸ ಮಾಡಲಿ ಎಂಬ ಉದ್ದೇಶದಿಂದಜವಾಬ್ದಾರಿ ವಹಿಸುವ ಉದ್ದೇಶದಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು ಇದು ಪಕ್ಷಾತೀತ ಕಾರ್ಯಕ್ರಮವಾಗಿರುವುದರಿಂದ ಎಲ್ಲರನ್ನು ಆಹ್ವಾನಿಸಲಾಗುತ್ತದೆ ಎಂದರು.
ಹೊಸದಾಗಿ ಆಯ್ಕೆಯಾಗಿರುವ ಎಮ್ಮೆಲ್ಸಿ ಚೌಡರೆಡ್ಡಿ ಅವರನ್ನು ತೆರೆದ ವಾಹನದ ಮೂಲಕ ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ಟಿ. ಚನ್ನಯ್ಯ ರಂಗಮಂದಿರಕ್ಕೆ ಕೆರೆ ತರಲಾಗುವುದೆಂದು ತಿಳಿಸಿದರು. ಆಗ ಪತ್ರಕರ್ತರು ಜಿಲ್ಲೆಯಲ್ಲಿ ಬರಗಾಲವಿದೆ, ಅದ್ಧೂರಿ ಮೆರವಣಿಗೆ ಬದಲಿಗೆ ಪದವೀಧರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ನಡೆಸುವುದು ಒಳ್ಳೆಯದಲ್ಲವೇ ಎಂದಾಗ, ಸಲಹೆ ಪರಿಗಣಿಸುವುದಾಗಿ ಹೇಳಿದರು.
ರಾಜ್ಯಕ್ಕೆ ಸೀಮಿತವಾಗಿದ್ದ ಪದವೀಧರರ ವೇದಿಕೆಯನ್ನು ಜಿಲ್ಲೆಗೆ ವಿಸ್ತರಿಸಿ ಪದವೀಧರರನ್ನು ನೊಂದಾಯಿಸುವ ಮೂಲಕ ಇದರ ವ್ಯಾಪ್ತಿಯನ್ನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಉದ್ದೇಶಿಸಿರುವುದಾಗಿ ಹೇಳಿದರು. ವೇದಿಕೆಯ ಸದಸ್ಯರಾದ ಮುರಾಂಡಹಳ್ಳಿ ಗೋಪಾಲ್, ಅಶ್ವತ್ಥ ಗೌಡ, ಗೋಪಾಲಗೌಡ, ಶಶಿ, ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement