ಮುಂಗಾರು ಶುಭಾರಂಭಕ್ಕೆ ರೈತರ ಸಂತಸ
ಕೋಲಾರ: ಮುಂಗಾರು ತಡವಾಗಿಯಾದರೂ ಆರಂಭವಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣಲಾರಂಭಿಸಿದೆ.
ಮಳೆ ಇಲ್ಲದೆ ಮೂಲೆ ಸೇರಿದ್ದ ನೇಗಿಲುಗಳು ಈಗ ಹೊರಬಂದಿವೆ. ರೈತರು ಭೂಮಿಯನ್ನು ಹದ ಮಾಡಿ ರಾಗಿ, ಬತ್ತ ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಅಲ್ಪ-ಸ್ವಲ್ಪ ಮಳೆಯಿಂದ ನಾಟಿ ಮಾಡಿರುವ ನೆಲಗಡಲೆಗೆ ಮೇ ಮತ್ತು ಜೂನ್ನಲ್ಲಿ ಬಿದ್ದ ಅಲ್ಪ ಪ್ರಮಾಣದ ಮಳೆ ಆಶ್ರಯವಾಗಿದೆ. ಇತ್ತೀಚೆಗೆ ಬಿದ್ದ ಒಂದೆರೆಡು ಜೋರು ಮಳೆಯಿಂದಾಗಿ ನೆಲಗಡಲೆ ನೆಲಕಚ್ಚುವುದು ತಪ್ಪಿದೆ.
ಜಿಲ್ಲೆಯಲ್ಲಿ ಕೆಲವು ಕಡೆ ಉತ್ತಮವಾಗಿ ಮಳೆಯಾಗಿದ್ದರೆ ಮತ್ತೆ ಕೆಲವು ಕಡೆ ಮಳೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಆದರೂ ರೈತರು ವರುಣನ ಮೇಲೆ ಭರವಸೆಯಿಟ್ಟು ಜಮೀನಿಗೆ ಇಳಿದಿದ್ದಾರೆ. ಜುಲೈ ತಿಂಗಳ ಅಂತ್ಯಕ್ಕೆ ಇಲ್ಲವೇ ಆಗಸ್ಟ್ ಎರಡನೇ ವಾರದಲ್ಲಿ ಹೆಚ್ಚಿನ ಮಳೆ ನಿರೀಕ್ಷಿಸಲಾಗಿದೆ. ಆಗಸ್ಟ್ ನಂತರವೂ ಮಳೆ ಬಾರದಿದ್ದರೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಜಿಲ್ಲಾ ಆಡಳಿತ ಬರ ಮತ್ತು ಮಳೆ ಎರಡನ್ನು ನಿಬಾಯಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಕೃಷಿಗೆ ಮತ್ತು ಜನ-ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇವಿಗೆ ಸಧ್ಯಕ್ಕೆ ಸಮಸ್ಯೆ ಇಲ್ಲ, ಅಲ್ಪ-ಸ್ವಲ್ಪ ಮಳೆಯಿಂದಾಗಿ ಮೇವಿಗೆ ಜೀವ ಬಂದಂತಾಗಿದೆ.
ಬಿತ್ತನೆ ಪ್ರಮಾಣ: ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಒಣ ಹವೆಯಿಂದಾಗಿ ಬಿತ್ತನೆ ಸ್ಥಗಿತಗೊಂಡಿತ್ತು. ಜುಲೈ ಎರಡನೇ ವಾರದಿಂದಿಚೆಗೆ ಬಿತ್ತನೆ ಆಗಿರುವುದು ಕೇವಲ 9716 ಹೆಕ್ಟೇರ್ ಪ್ರದೇಶ (ಶೇ. 10) ದಲ್ಲಿ ಮಾತ್ರ. ನೆಲಗಡಲೆ ಹೆಚ್ಚು ಬೆಳೆಯುವ ಬಂಗಾರಪೇಟೆಯಲ್ಲಿ 1480 ಹೆಕ್ಟೇರ್ರಿಗೆ 1597 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮುಳಬಾಗಲು ತಾಲೂಕಿನಲ್ಲಿ 7650 ಹೆಕ್ಟೇರ್ ಗುರಿ ಹೊಂದಿದ್ದು 5004 ಹೆಕ್ಟೇರ್ ಸಾಧನೆ ಆಗಿದ್ದರೆ, ಉಳಿದ ತಾಲೂಕುಗಳಲ್ಲಿ ನೆಲಗಡಲೆ ಬಿತ್ತನೆ ಪ್ರಮಾಣ ಅತಿ ಕಡಿಮೆ.
ಉತ್ತಮ ಮಳೆ ನಿರೀಕ್ಷೆ: ಶ್ರೀನಿವಾಸಪುರ ತಾಲೂಕಿನ ರೈತರು ಮಳೆ ಇಲ್ಲದೆ ಹೊಲದತ್ತ ಮುಖ ಮಾಡಿರಲಿಲ್ಲ. ಈಗ ಕೊಂಚ ಮಟ್ಟಿಗೆ ಸಮಾಧಾನಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ. ನೆಲಗಡಲೆಗೆ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದು,ಈ ವಾರದ ಅಂತ್ಯದವರೆಗೆ ಬಿತ್ತನೆ ಮಾಡಬಹುದಾದರೂ ಇಳುವರಿ ಬಗ್ಗೆ ಆತಂಕ ಇದ್ದೇ ಇದೆ. ತೊಗರಿ ಬೆಳೆ ಬಿತ್ತನೆ ಮತ್ತೆ ಆರಂಭವಾಗಿದೆ. ಕೆಲ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆಗೂ ಮುಂದಾಗಿದ್ದಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ರಾಗಿ ಬೆಳೆ ಬಿತ್ತನೆಗೆ ಇನ್ನೂ ಒಂದೂವರೆ ತಿಂಗಳ ಕಾಲಾವಕಾಶ ಇರುವುದರಿಂದ ರೈತರು ಆಶಾಭಾವ ಹೊಂದಿದ್ದಾರೆ.
ಕೋಲಾರ ಜಿಲ್ಲೆಯ ಮಳೆ ವಿವರ
ಜುಲೈ ತಿಂಗಳಲ್ಲಿ ಜಿಲ್ಲೆಯಾಧ್ಯಂತ ನಾಲ್ಕೈದು ದಿನ ಮಳೆಯಾಗಿದೆ. ಬಂಗಾರಪೇಟೆ ತಾಲೂಕಿನ ವಿವಿಧ ಹೋಬಳಿಗಳಲ್ಲಿ 550 ಮಿಮೀ, ಕೋಲಾರ-120 ಮಿಮೀ, ಮಾಲೂರು-162 ಮಿಮೀ ,ಮುಳಬಾಗಲು- 180 ಮಿಮೀ ಹಾಗೂ ಶ್ರೀನಿವಾಸಪುರ-112 ಮೀಮೀ ಮಳೆಯಾಗಿದೆ.
ಕೋಲಾರ ಜಿಲ್ಲೆಯಲ್ಲಿ ಬಿತ್ತನೆಯ ಪ್ರಗತಿ
ತಾಲೂಕು ಗುರಿ ಸಾಧನೆ ಶೇ.ಪ್ರಗತಿ
ಬಂಗಾರಪೇಟೆ 23630 2615 11
ಕೋಲಾರ 19115 774 4
ಮಾಲೂರು 16055 575 4
ಮುಳಬಾಗಲು 26075 5670 22
ಶ್ರೀನಿವಾಸಪುರ 17125 82 0
ಗುರಿ ನಿಗದಿ 102,200 9716 10