ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಗಡಿ ಮಳಿಗೆ ರೋಲಿಂಗ್ ಶೆಟ್ಟರ್ ಮುರಿದು ಕಳ್ಳತನ

Srinivasa Murthy VN
Updated On : 15 Jul 2014, 1:11 am

ಚಿಂತಾಮಣಿ: ಕೈವಾರ ಮತ್ತು ಕ್ರಾಸ್‌ನಲ್ಲಿ 4 ಅಂಗಡಿ ಮಳಿಗೆಗಳ ರೋಲಿಂಗ್ ಶೆಟ್ಟರ್‌ಗಳನ್ನು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರು. ಮಾಲು ಹಾಗೂ ನಗದು ಸಮೇತ ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಾಮಣಿ-ಬೆಂಗಳೂರು ಮುಖ್ಯರಸ್ತೆಯ ಕೈವಾರ ಕ್ರಾಸ್ ಬಳಿ ಇರುವ ವಿ.ಜಿ. ಹಾರ್ಡ್‌ವೇರ್, ಶ್ರೀನಿವಾಸಚಾರಿ ಚಿನ್ನದ ಅಂಗಡಿ, ನಾಗರಾಜ್ ಕೋಳಿಮೊಟ್ಟೆ ಅಂಗಡಿ ಮತ್ತು ಕೈವಾರದಲ್ಲಿನ ಅನ್ನಪೂರ್ಣೇಶ್ವರಿ ಸ್ಟೋರ್ ಅಂಗಡಿಗಳಲ್ಲಿ ಭಾನುವಾರ ಮಧ್ಯರಾತ್ರಿ ಅಪರಿಚಿತ ಕಳ್ಳರ ಗುಂಪೊಂದು 4 ಅಂಗಡಿ ಮಳಿಗೆಗಳ ರೋಲಿಂಗ್ ಶೆಟ್ಟರ್‌ಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 50 ಸಾವಿರ ನಗದು ಹಣ, ಚಿನ್ನ ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವುದಾಗಿ ಮಾಲೀಕರು ದೂರನ್ನು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ಪರಿಶೀಲಿಸಲಾಯಿತು. ಸ್ಥಳದಲ್ಲಿ ಡಿವೈಎಸ್ಪಿ ಸಣ್ಣತಿಮ್ಮಪ್ಪ, ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಸಬ್‌ಇನ್ಸೆಪೆಕ್ಟರ್ ನಟರಾಜ್ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಕ್ಯಾನ್ ಸೆಂಟರ್‌ನಲ್ಲಿ ಕಳವು
ಕೋಲಾರ: ನಗರದ ಬಂಗಾರಪೇಟೆ ವೃತ್ತದ ಸಮೀಪಿರುವ ವಂದನ ಡಯಾಗ್ನಸ್ಟಿಕ್ ಸ್ಕ್ಯಾನ್ ಸೆಂಟರ್‌ನಲ್ಲಿ ಬೆಲೆ ಬಾಳುವ ಉಪಕರಣಗಳನ್ನು ದೋಚಿದ ಘಟನೆ ನಡೆದಿದೆ. ಸೆಂಟರ್ ಹಿಂಬಾಗಿಲಿನಿಂದ ಒಳ ಪ್ರವೇಶಿಸಿರುವ ಕಳ್ಳರು 40 ಸಾವಿರ ಬೆಲೆ ಬಾಳುವ ಲ್ಯಾಪ್‌ಟಾಪ್, 10 ಸಾವಿರದ ಎಲ್‌ಸಿಡಿ ಮಾನಿಟರ್ ಹಾ ಕೀ ಬೋರ್ಡ್, ಕ್ಯಾಮೆರಾ ಮತ್ತು 50 ಸಾವಿರ ನಗದನ್ನು ದೋಚಲಾಗಿದೆ ಎಂದು ಡಾ. ಎಂ.ಜಿ ಚದಾನಂದ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ರೈತ ಅಸ್ವಸ್ಥ
ಚಿಂತಾಮಣಿ: ತೋಟದಲ್ಲಿ ರೈತನೊಬ್ಬ ಕೆಲಸ ಮಾಡುತ್ತಿರುವಾಗ ವಿಷಪೂರಿತ ಹಾವೊಂದು ಕಚ್ಚಿದ ಪರಿಣಾಮ ತಕ್ಷಣ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪ್ಪಲ್ಲಿ ಗ್ರಾಮದಿಂದ ವರದಿಯಾಗಿದೆ. ತಾಲೂಕಿನ ದೇವಪ್ಪಲ್ಲಿ ಗ್ರಾಮದ ಈಶ್ವರಪ್ಪ ಬಿನ್. ಲಕ್ಷ್ಮಯ್ಯ(60) ಎಂಬ ರೈತ ಬೆಳಿಗ್ಗೆ ತನ್ನ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ತಕ್ಷಣ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement