ಕರ್ನಾಟಕ ದಲಿತ ಸಂಘರ್ಷ ಸಮಿತಿ
ತಾಲೂಕು ಪದಾಧಿಕಾರಿಗಳ ಆಯ್ಕೆ
ಗೌರಿಬಿದನೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಎಚ್. ಎನ್. ಸನಂದ್ ಕುಮಾರ್ ಮತ್ತು ವಿ. ನಾರಾಯಣಸ್ವಾಮಿರವರ ನೇತೃತ್ವದಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ತಾಲ್ಲೂಕು ಸಂಚಾಲಕರಾಗಿ ಕೆ.ಜಿ. ಲಕ್ಷ್ಮೀ ನಾರಾಯಣ(ಕಾಮಗಾನಹಳ್ಳಿ), ಸಂಘಟನಾ ಸಂಚಾಲಕರಾಗಿ ಡಿ.ಎಂ.ಗೋಪಾಲ್, ಎನ್. ಗಂಗಾಧರಪ್ಪ, ಕದಿರಪ್ಪ ಎಚ್.ಎಂ, ಡೈರಿ.ಗಂಗಾಧರಪ್ಪ, ಅರುಣ ಕುಮಾರ್, ಶಂಕರಪ್ಪ, ಬಾಲಕೃಷ್ಣ, ಜಿ ನರಸಿಂಹ ಮೂರ್ತಿ(ಜಿ.ಟಿ.ಪಿ), ಮೇಳ್ಯಾ ಆಶ್ವತ್ಥಪ್ಪ, ಖಜಾಂಚಿಯಾಗಿ ಸಂತೋಷ್, ರಾಮಾಂಜಿನಪ್ಪ, ಕಾನೂನು ಸಲಹೆಗಾರಾಗಿ ಎನ್. ಶಿವಣ್ಣ, ವಿಧ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ನರೇಂದ್ರ ಬಾಬು, ಮಹಿಳಾ ಒಕ್ಕೂಟ ಸಂಚಾಲಕರಾಗಿ ವೆಂಕಟಲಕ್ಷ್ಮಮ್ಮ, ಸಲಹಾ ಸಮಿತಿ ಸದಸ್ಯರಾಗಿ ಲಕ್ಷ್ಮಯ್ಯ, ಬಾಬು.ಎನ್, ಬಾಲಪ್ಪ, ನಾಗರಾಜು, ರಾಮಾಂಜಿನಪ್ಪ, ಗಂಗರಾಜು, ಎಚ್.ಕೆ. ಮೂರ್ತಿ, ಡಿ.ಬಿ.ನಾರಾಯಣಸ್ವಾಮಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಎಚ್.ಎನ್.ಸನಂದ್ಕುಮಾರ್ ಮಾತನಾಡಿದರು. ಹೊಸೂರು ನಂಜುಂಡಪ್ಪ, ಗೆದರೆ ಶ್ರೀನಿವಾಸ, ಮೇಲೂರು ಮಂಜುನಾಥ, ಭಾಗ್ಯಮ್ಮ ನಾರಾಯಣಸ್ವಾಮಿ, ಎಂ.ಕೇಶವ, ಅಸ್ಲಾಂ ಪಾಷ ಸೇರಿದಂತೆ ಅನೇಕರು ಭಾಗವಹಿಸಿದ್ದರು.