ತಾಪಂಗೆ ಆಂಜಿನಮ್ಮ ಅಧ್ಯಕ್ಷೆ, ರಾಜು ಉಪಾಧ್ಯಕ್ಷ
ಶಿಡ್ಲಘಟ್ಟ: ತಾಲೂಕು ಪಂಚಾಯ್ತಿಯ ಅಧ್ಯಕ್ಷರಾಗಿ ಆಂಜಿನಮ್ಮ, ಉಪಾಧ್ಯಕ್ಷರಾಗಿ ಡಿ.ಎಸ್.ಎನ್.ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂರನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತುಮ್ಮನಹಳ್ಳಿ ಕ್ಷೇತ್ರದ ಪರಿಶಿಷ್ಟ ಪಂಗಡ ಜನಾಂಗದ ಆಂಜಿನಮ್ಮ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದ್ದರಿಂದ ದಿಬ್ಬೂರಹಳ್ಳಿ ಕ್ಷೇತ್ರದ ಡಿ.ಎಸ್.ಎನ್.ರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಕೆ.ಟಿ.ಶಾಂತಲಾ ಘೋಷಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಅಲ್ಲದೆ, ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಪಂ ಇಒ ಉಮೇಶ್, ಮಾಜಿ ಅಧ್ಯಕ್ಷ ಗಂಜಿಗುಂಟೆ ನರಸಿಂಹಮೂತರ್, ವೇಣುಗೋಪಾಲ್, ಯರಬಚ್ಚಪ್ಪ, ಸರಸ್ವತಮ್ಮ, ಸದಸ್ಯರಾದ ಚನ್ನಕೃಷ್ಣ, ವೆಂಕಟೇಶ್, ನಾರಾಯಣಸ್ವಾಮಿ, ಶ್ರೀನಾಥ್, ನೇತ್ರಾವತಿ, ಮಂಜುಳಮ್ಮ, ದ್ಯಾವಮ್ಮ, ರಾಧಿಕಾ, ಶಶಿಕಲಾ, ಮುಂತಾದವರು ಹಾಜರಿದ್ದರು.