ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ಸಮಸ್ಯೆಗೆ ಪರಿಹಾರ

Srinivasa Murthy VN
Updated On : 15 Jul 2014, 1:13 am

ಕೆಜಿಎಫ್: ನಗರಸಭೆ ವ್ಯಾಪ್ತಿಯಲ್ಲಿ ನೂತನವಾಗಿ 90 ಕೊಳವೆ ಬಾವಿ ಕೊರೆಸಿದ್ದು ಅದರಲ್ಲಿ 75 ಕೊಳವೆ ಬಾವಿಗಳಲ್ಲಿ ಉತ್ತಮ ನೀರು ದೊರೆತ್ತಿದ್ದು ಕಳೆದ ಎರಡು ತಿಂಗಳಿಂದ ಕ್ಷೇತ್ರದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಸಾರ್ವಜನಿಕರಿಗೆ ಇದೀಗ ಸಮಸ್ಯೆ ನಿವಾರಣೆಯಾಗಿದೆ ಎಂದು ನಗರಸಭಾ ಅಧ್ಯಕ್ಷ ಎಂ. ಭಕ್ತವತ್ಸಲಂ ಹೇಳಿದರು. ಪೌರಕಾರ್ಮಿಕರ ಕಾಲೊನಿಗಳಿಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಇತರೆ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿ, ನಗರವನ್ನು ಸ್ವಚ್ಛವಾಗಿ ಕಾಣಲು ಶ್ರಮವಹಿಸಿ ದುಡಿಯುವ ಪೌರಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ವೇಳೆ ಬಡಾವಣೆಯ ಮುರಳಿ, ಮಾಲ, ರಾಜೇಂದ್ರ, ಸುಬ್ರಮಣಿ, ವೆಂಕಟಸ್ವಾಮಿ ಇದ್ದರು.

ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ
ಗೌರಿಬಿದನೂರು: ಮಂಚೇನಹಳ್ಳಿಯಲ್ಲಿ ಏರ್ಪಡಿಸಿದ್ದ ತಾಲೂಕು ಚುಟುಕ ಸಾಹಿತ್ಯ ಪರಿಷತ್ ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾ.ನಾ. ಲಕ್ಷ್ಮಣಗೌಡ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಥಮ ಸಭೆ ನೆರವೇರಿತು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷರಾಗಿ ಬಿ.ಕೆ. ಶಾಂತರಾಜು, ಅಧ್ಯಕ್ಷರಾಗಿ ಪ್ರಭಾನಾರಾಯಣಗೌಡ, ಉಪಾಧ್ಯಕ್ಷರಾಗಿ ದೀಪಾ ಆಚಾರ್ಯ, ಕಾರ್ಯದರ್ಶಿಯಾಗಿ ಎಚ್.ಎನ್. ಕಿರಣ್‌ಕುಮಾರ್, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಾ ನಾಯಕ್ ಹಾಗೂ ರೇಣುಕಮ್ಮ, ಖಜಾಂಚಿ ಜಿ. ವೆಂಕಟೇಶ್, ಜಂಟಿ ಕಾರ್ಯದರ್ಶಿಗಳು ತಾರಾನಾಥ್, ಇಂದಿರಮ್ಮ, ಸಂಚಾಲಕರು ರಾಣಾಪ್ರತಾಪ್,  ಸಲಹಾ ಸಮಿತಿಯ ಹಿರಿಯರು ಸಾ.ನಾ.ಲಕ್ಷ್ಮಣಗೌಡ, ಎಂ.ಆರ್. ನಾಗರಾಜ್ ರಾವ್, ಎಂ.ಜಿ. ರಾಜೇಂದ್ರ ಹಾಗೂ  ಸದಸ್ಯರು ಮನೋಹರ್ ಕೋಲಾರ್, ಪವನ್ ಕುಮಾರ್, ಎಂ. ಮಲ್ಲಿಕಾರ್ಜುನ್, ಆದಿನಾರಾಯಣಗೌಡ ಎಚ್.ಎಸ್. ಎಚ್.ಎ. ಚನ್ನಕೃಷ್ಣೇಗೌಡ, ನವೀನ್ ಕುಮಾರ್ ಜಿ.ಟಿ,   ಡಿ. ಹರ್ಷ, ಪಾರ್ಶ್ವನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement