ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಂಜಾನ್ ಸಡಗರಕ್ಕೆ ಭರ್ಜರಿ ಸಿದ್ಧತೆ

Srinivasa Murthy VN
Updated On : 28 Jul 2014, 11:41 am

ಕೋಲಾರ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ಆಚರಣೆಗಾಗಿ ನಗರದ ಮುಸ್ಲಿಂ ಬಾಂಧವರು ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ವ್ಯಾಪಾರ ಜೋರಾಗಿತ್ತು. ಹಬ್ಬಕ್ಕೆ ಬೇಕಾದ ಸಾಮಾಗ್ರಿ, ಬಟ್ಟೆ, ಹಣ್ಣು ಹಂಪಲು ಖರೀದಿಯಲ್ಲಿ ಮಗ್ನರಾಗಿದ್ದರು. ಅಮ್ಮವಾರಪೇಟೆ, ಕಾಳಮ್ಮಗುಡಿ ಬೀದಿ, ದೊಡ್ಡಪೇಟೆ ಹಾಗೂ ಎಂ.ಜಿ.ರಸ್ತೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ದುಬಾರಿ ಬೆಲೆಯ ಖರ್ಜೂರ, ಗೋಡಂಬಿ, ದ್ರಾಕ್ಷಿ ಮುಂತಾದ ಪದಾರ್ಥಗಳನ್ನು ಖರೀದಿಸಿದರು. ಒಂದು ತಿಂಗಳ ಉಪವಾಸ ವೃತ ಆಚರಿಸಿ ರಂಜಾನ್ ಚಂದ್ರನ ದರ್ಶನಕ್ಕಾಗಿ ಕಾಯುತ್ತಿರುವ ಮುಸ್ಲಿಂ ಸಮುದಾಯ ಮಂಗಳವಾರ ವಿಶೇಷ ಪ್ರಾರ್ಥನೆಗಳೊಂದಿಗೆ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಿದ್ದಾರೆ. ಹೆಣ್ಣು ಮಕ್ಕಳು ಮೆಹಂದಿ ಹಾಕಿಸಿಕೊಂಡು ಹಬ್ಬಕ್ಕೆ ಮೆರಗು ನೀಡುತ್ತಿದ್ದಾರೆ. ಸುಗಂಧ ದ್ರವ್ಯಗಳ ಮಾರಾಟ ಸಹ ಭರ್ಜರಿಯಾಗಿ ನಡೆದಿದೆ. ಮಂಗಳವಾರ ಬೆಳಿಗ್ಗೆ ಮುಸ್ಲಿಂ ಸಮುದಾಯದವರು ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೌಲ್ವಿಗಳ ಸಂದೇಶವನ್ನು ಅಲಿಸಲಿದ್ದಾರೆ. ಜಿಲ್ಲಾ ಆಡಳಿತ ಮತ್ತು ನಗರಸಭೆ ರಂಜಾನ್ ಹಬ್ಬದಲ್ಲಿ ಭಾಗಿಯಾಗುವ ಜನರಿಗೆ ನೀರಿನ ವ್ಯವಸ್ಥೆ, ಪೊಲೀಸ್ ರಕ್ಷಣೆ, ಸ್ವಚ್ಛತೆ ಹಾಗೂ ಇನ್ನಿತರ ಮೂಲ ಸೌಕರ್ಯ ಕಲ್ಪಿಸಿದೆ.
ರಂಜಾನ್ ಹಬ್ಬದ ಸಲುವಾಗಿ ಮಂಗಳವಾರ ಟವರ್ ಕ್ಲಾಕ್‌ನಿಂದ ದರ್ಗಾ ಮೈದಾನದವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಬ್ಬದಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಇಫ್ತಾರ್ ಕೂಟ
ಟೇಕಲ್: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರಿಗೆ ಹಿಂದೂಗಳು ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಈ ಕೂಟವನ್ನು ಗ್ರಾಪಂ ಸದಸ್ಯ ಟಿ.ಜಿ.ಸೀನಪ್ಪ ಏರ್ಪಡಿಸಿದ್ದರು. ಈ ವೇಳೆ, ಜೆಡಿಎಸ್ ಮುಖಂಡ ವೆಂಕಟಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ವಜೀರ್, ಸನಾ, ಅಕ್ಮಲ್, ಜಿಯಾ, ವೆಂಕಟಾಚಲಪತಿಗೌಡ, ಶ್ಯಾಮಣ್ಣ, ಕಾಂಗ್ರೆಸ್ ಸಮಿತಿ ಸದಸ್ಯ ಟಿ.ವಿ.ಪ್ರಕಾಶ್ ಶೆಟ್ಟಿ ಸೇರಿದಂತೆ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement