ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಹಿಂದ ವರ್ಗದ ಬಗ್ಗೆ ಸಿಎಂಗೆ ಕಾಳಜಿ ಇದ್ದರೆ ಬಗರ್ ಹುಕುಂ ಜಮೀನು ನೀಡಲಿ

Srinivasa Murthy VN
Updated On : 30 Jul 2014, 1:15 am

ಕೋಲಾರ/ಶ್ರೀನಿವಾಸಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಲೂ ಅಹಿಂದ ವರ್ಗಗಳ ಮೇಲೆ ಕಾಳಜಿ ಇದ್ದರೆ ರಾಜ್ಯದಲ್ಲಿನ 15 ಲಕ್ಷ ರೈತರಿಗೆ ಬಗರ್ ಹುಕುಂ ಜಮೀನು ವಿತರಿಸಿದರೆ ಇಂದಿರಾಗಾಂಧಿ ಮತ್ತು ದೇವರಾಜ ಅರಸು ಅವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕೆಪಿಆರ್‌ಎಸ್ ಆಯೋಜಿಸಿದ್ದ 5ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ 15 ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಅವೈಜ್ಞಾನಿಕ ನೀತಿಗಳಿಂದ ರೈತರಿಗೆ ತೊಂದರೆಯಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಆರೋಪಿಸಿದರು. ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಎನ್.ವೀರಪ್ಪರೆಡ್ಡಿ, ಜಿಲ್ಲಾ ಮುಖಂಡ ವೆಂಕಟೇಶ್, ಸೀತಮ್ಮ, ದಿಂಬಾಲ ಶ್ರೀನಿವಾಸ್, ವಿ.ಆನಂದ್, ಸಿ.ಎಂ.ಗೌಡ, ನಾಗಭೂಷಣ, ಜಿ.ಈಶ್ವರಮ್ಮ, ವೆಂಕಟಾಚಲಪತಿ ಇದ್ದರು.  ನವಿನ್ ಕುಮಾರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement