ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆರೋಗ್ಯದ ಕಡೆ ಗಮನಕೊಡಿ: ರಾಧಾಮಣಿ

Srinivasa Murthy VN
Updated On : 30 Jul 2014, 1:16 am

ಬಂಗಾರಪೇಟೆ: ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದು ಬಿಎಂಎಸ್‌ಎಸ್ ಸಂಸ್ಥೆ ಸಂಯೋಜಕಿ ಎಂ.ವಿ. ರಾಧಾಮಣಿ ಹೇಳಿದರು.
  ಸೂಲಿಕುಂಟೆ ಗ್ರಾಪಂ ವ್ಯಾಪ್ತಿಯ ಮುಗಳಬೆಲೆ ಗ್ರಾಮದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆ, ಫೋಕಸ್ ಸಂಸ್ಥೆ ಮತ್ತು ಜನವಾದಿ ಮಹಿಳಾ ಸಂಘಟನೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಗಾರಪೇಟೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯವನ್ನು ವಿಚಾರಿಸುವ ಮಹಿಳೆಯರು ಕೆಲಸದ ಒತ್ತಡಗಳಿಂದ ತಮ್ಮ ಆರೋಗ್ಯದ ಕಡೆ ಗಮನ ನೀಡದೆ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ತಾಯಿ ಆರೋಗ್ಯವಾಗಿದ್ದರೆ ಮಕ್ಕಳು ಆರೋಗ್ಯದಿಂದ ಇರಲು ಸಾಧ್ಯ ಎಂದರು.  ಸೂಲಿಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನವಾದಿ ಮಹಿಳಾ ಸಂಘದ ಗ್ರಾಮ ಘಟಕಗಳ ಸದಸ್ಯರು, ಸ್ವ-ಸಹಾಯ ಸಂಘದ ಪ್ರತಿನಿಧಿಗಳು, ಗ್ರಾಮದ ಮುಖಂಡರು ಉಚಿತ ಆರೋಗ್ಯದ ತಪಾಸಣೆ ಅನುಕೂಲವನ್ನು ಪಡೆದುಕೊಂಡರು. ಆರೋಗ್ಯ ಇಲಾಖೆ ಕಿರಿಯ ಸಹಾಯಕಿ ಗಿರಿಜಾ, ಆಪ್ತ ಸಲಹೆಗಾರ ಹುಸೇನ್, ಫೋಕಸ್ ಸಂಸ್ಥೆಯ ನಿರ್ದೇಶಕ ಎ.ಹರೀಶ್, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎನ್.ರವೀಂದ್ರ, ಮುಖಂಡರಾದ ಶ್ರೀನಿವಾಸ್, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಕುಮಾರ್, ಜನವಾದಿ ಮಹಿಳಾ ಸಂಘಟನೆ ಮುಗಳಬೆಲೆ ಗ್ರಾಮದ ಅಧ್ಯಕ್ಷೆ ಲಕ್ಷ್ಮಮ್ಮ, ಹಂಸ, ಶೋಭ, ಪಾರ್ವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement