ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಂಚಾಯ್ತಿಗಳ ಬಯೋವುಟ್ರಿಕ್ ಪಂಕ್ಚರ್

Srinivasa Murthy VN
Updated On : 2 Jun 2014, 1:45 am

ಮೇಲಧಿಕಾರಗಳು ಗರಂ, ಈ ಪದ್ಧತಿ ಅನುಷ್ಠಾನಕ್ಕೆ ನೂರೆಂಟು ವಿಘ್ನ
ಕೋಲಾರ ಜಿಪಂನಲ್ಲಿ ಬಯೋವುಟ್ರಿಕ್ ಜಾರಿಗೆ ಮುಂದಾದ ಸಿಇಒ
ಕೋಲಾರ: ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರಲ್ಲಿ ಸಮಯ ಪ್ರಜ್ಞೆ ಮೂಡಿಸಲು ಸರ್ಕಾರ ಬಯೋವುಟ್ರಿಕ್ ಅಳವಡಿಸಲು ಎರಡು ಬಾರಿ ಸುತ್ತೋಲೆ ಹೊರಡಿಸಿದ್ದರೂ ಅನುಷ್ಠಾನ ಮಾತ್ರ ಅಷ್ಟಕಷ್ಟೇ!
ನೌಕರರಲ್ಲಿ ಹಾಜರಿ ಶಿಸ್ತಿಗಾಗಿ 2013ರ ನವೆಂಬರ್ 14ರಂದು ಸರ್ಕಾರ ಬಯೋವುಟ್ರಿಕ್ ಪದ್ಧತಿ ಜಾರಿಗೆ ತರುವಂತೆ ಆದೇಶ ನೀಡಿತ್ತು. ಆದರೆ, ಜಿಪಂ, ತಾಪಂ, ಗ್ರಾಪಂಗಳಲ್ಲಿ ಈ ವ್ಯವಸ್ಥೆ ಜಾರಿ ಆಗದಿದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2014ರ ಜನವರಿ 27ರಂದು ಮತ್ತೊಂದು ಸುತ್ತೋಲೆ ಹೊರಡಿಸಿತ್ತು. ಆದರೂ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ದೊರಕಿಲ್ಲ.
ಕೋಲಾರ ಜಿಪಂನಲ್ಲಿ ಕಳೆದ 2 ತಿಂಗಳ ಹಿಂದೆ ಪ್ರಾಯೋಗಿಕವಾಗಿ ಅಳವಡಿಸಿದ್ದ ಬಯೋವುಟ್ರಿಕ್ ಕಾರ್ಯಾರಂಭಗೊಂಡಿಲ್ಲ. ಉಪಕರಣದ ಗುಣಮಟ್ಟ ಸರಿಯಿಲ್ಲ ಹಾಗೂ ತಾಂತ್ರಿಕ ಪರಿಣಿತ ಹೊಂದಿರುವ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಬಯೋವುಟ್ರಿಕ್ ಹಾಜರಾತಿ ಚಾಲನೆ ಸಿಕಿಲ್ಲ. ಇದೇ ರೀತಿ ಜಿಲ್ಲೆಯ ಒಂದು ತಾಪಂ ಹಾಗೂ ಎರಡು ಗ್ರಾಪಂಗಳಲ್ಲೂ ಬಯೋವುಟ್ರಿಕ್ ಉಪಕರಣ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆಯಾದರೂ ತಾಂತ್ರಿಕತೆಯ ಕಾರಣದಿಂದ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕ್ರಿಯೆಗೆ ಒಲವು: ಆರ್.ಡಿ.ಪಿ.ಆರ್ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ ಬಳಿಕ ಎಚ್ಚೆತ್ತುಕೊಂಡಿರುವ ಕೋಲಾರ ಜಿಪಂ ಸಿಇಒ ವಿನೋತ್ ಪ್ರಿಯಾ ಅವರು ಬಯೋವುಟ್ರಿಕ್ ಜಾರಿಗೆ ಆಸಕ್ತಿ ತೋರಿ, ತಾಂತ್ರಿಕತೆ ಗೊತ್ತಿರುವ ಸಿಬ್ಬಂದಿ ನೇಮಕಕ್ಕಾಗಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಜಿಪಂನಲ್ಲಿ ಪಾಯೋಗಿಕವಾಗಿ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಬಳಿಕ ಜಿಲ್ಲೆಯ ಐದು ತಾಪಂ ಹಾಗೂ 156 ಗ್ರಾಪಂಗಳಲ್ಲೂ ಕಡ್ಡಾಯವಾಗಿ ಬಯೋವುಟ್ರಿಕ್ ಉಪಕರಣ ಅಳವಡಿಸಿ ಸರ್ಕಾರದ ಆಶಯ ಈಡೇರಿಸಲು ಒಲವು ತೋರಿದ್ದಾರೆ. ಈ ಕಾರ್ಯಕ್ಕೆ ಪಂಚಾಯಿತಿಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಿದಲ್ಲಿ ಮಾತ್ರ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿ ಮಾಡುವ ಸಾಧನಗಳಿಗೆ ಬೆಲೆ ಸಿಕ್ಕಿದಂತಾಗುತ್ತದೆ. ವಿಶೇಷ ಎಂದರೆ, ಈ ಹಿಂದೆ ಇದ್ದ ಪಂಚಿಂಗ್ ವ್ಯವಸ್ಥೆ ಕೂಡಾ ಬಂದಾಗಿ 12 ವರ್ಷಗಳಾಗಿವೆ! 2001-02ರಲ್ಲಿ ಜಿಪಂ ಸಿಇಒ ಆಗಿದ್ದ ಬಲದೇವಕೃಷ್ಣ ಪಂಚಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರು. ಕೆಲವು ಲೋಪಗಳ ನಡುವೆಯೂ ಈ ಯೋಜನೆ ಕೆಲ ಕಾಲ ಜಾರಿಯಲ್ಲಿತ್ತಾದರೂ ಯಂತ್ರ ತಾಂತ್ರಿಕ ದೋಷದಿಂದ ಯಶಸ್ವಿಯಾಗಿಲಿಲ್ಲ.

ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ
ಬಯೋವುಟ್ರಿಕ್‌ಗೆ ಸಂಬಂಧಿಸಿದಂತೆ ಕೋಲಾರ ಸೇರಿ ಇನ್ನಿತರ ಜಿಪಂ, ತಾಪಂ, ಗ್ರಾಪಂಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಗಂಗಾರಾಮ ಬಡೇರಿಯಾ ಸೂಚಿಸಿದ್ದಾರೆ. ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ನೌಕರರು ಸಮಯ ಪಾಲನೆ ಮಾಡದೆ ತಮಗಿಷ್ಟ ಬಂದ ವೇಳೆಗೆ ಕಚೇರಿಗೆ ಹಾಜರಾಗುತ್ತಾರೆ. ಅದೇ ರೀತಿ ಯಾವುದೋ ನೆಪ ಹೇಳಿ ಅವಧಿಗಿಂತ ಮುಂಚಿತವಾಗಿಯೇ ಕಚೇರಿಯಿಂದ ನಿರ್ಗಮಿಸುತ್ತಾರೆ. ಸಾರ್ವಜನಿಕರಿಗೆ ಸಕಾಲಕ್ಕೆ ಅಧಿಕಾರಿಗಳು ಸಿಗುವುದಿಲ್ಲವೆಂಬ ದೂರುಗಳ ಹಿನ್ನಲೆಯಲ್ಲಿ ಶಿಸ್ತು ಮೂಡಿಸಲು ಬಯೋವುಟ್ರಿಕ್ ಜಾರಿಗೆ ಸರ್ಕಾರಕ್ಕೆ ಮುಂದಾಗಿದೆ. ಆದರೆ, ಅದಕ್ಷೆ ನೌಕರರಿಂದ ಪ್ರತಿಕ್ರಿಯೆ ಮಾತ್ರ ತೃಪ್ತಿಕರವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement