ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ಧಾನ್ಯ ಸಂತೆಯಲ್ಲಿ ಮಾರುತ್ತಿದ್ದ ದಳ್ಳಾಳಿಗೆ ಮುತ್ತಿಗೆ

Srinivasa Murthy VN
Updated On : 2 Jun 2014, 1:46 am

ಚಿಂತಾಮಣಿ: ರೈತನಿಗೆ ನೀಡುವ ಸರ್ಕಾರಿ ಧಾನ್ಯವನ್ನು ಎಪಿಎಂಸಿ ದಳ್ಳಾಳಿ ಕಾಳು ಸಂತೆಯಲ್ಲಿ ಮಾರಾಟ ಮಾಡು ತ್ತಿರುವ ಖಚಿತ ಮಾಹಿತಿ ಮೇರೆಗೆ ಹಲವಾರು ರೈತರು, ದಳ್ಳಾಳಿ ವಿರುದ್ಧ ಮುತ್ತಿಗೆ ಹಾಕಿ ಪೋಲೀಸರಿಗೆ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ದಳ್ಳಾಳಿಯೊಬ್ಬ ಭಾನುವಾರ ಸಂತೆಯಲ್ಲಿ ಸುಮಾರು ಮೂರು ಮೂಟೆಯಷ್ಟು ಜೋಳವನ್ನು ಕಾಳು ಸಂತೆಯಲ್ಲಿ ಪ್ರತಿ ಕೆ.ಜಿ.ಗೆ 30ನಂತೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ರೈತರೊಂದಿಗೆ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ವಿಷಯ ಗೊತ್ತಾಗುತ್ತಿದ್ದಂತೆ ನಗರ ಠಾಣೆಯಲ ಪಿಎಸ್‌ಐ ಮುರಳಿ ಆಗಮಿಸಿ, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆಗ ಪರಿಸ್ಥಿತಿ ತುಸು ಬಿಗುವಿನಿಂದ ಕೂಡಿತ್ತು. ನಂತರ ಈ ಘಟನೆ ಬಗ್ಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪೊಲೀಸರ ಸಮಕ್ಷದಲ್ಲಿ ಮಾಲನ್ನು ವಶಪಡಿಸಿಕೊಳ್ಳಲಾಯಿತು. ಈ ವೇಳೆ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಜೆ.ವಿ.ರಘುನಾಥ ರೆಡ್ಡಿ, ಗೌರವಾದ್ಯಕ್ಷ ಗೌಸ್‌ಪೀರ್, ಸಂಚಾಲಕರಾದ ಎಸ್.ವಿ.ಗಂಗುಲಪ್ಪ, ರೆಡ್ಡಪ್ಪ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶಪ್ಪ, ಜಿಲ್ಲಾ ಸಂಚಾಲಕರಾದ ನಾರಾಯಣ ಸ್ವಾಮಿ, ಎಂ.ಪಿ.ರಾಮಿರೆಡ್ಡಿ, ಶ್ರೀರಾಮ ರೆಡ್ಡಿ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

ಶಿಕ್ಷಕರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಆಗ್ರಹ
ಮಾಲೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಲ್ಲಿನ ಎಸ್‌ಬಿಐ ಶಾಖೆ ವ್ಯವಸ್ಥಾಪಕರನ್ನು ಭೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಆರ್.ನರಸಿಂಹ, ತಾಲೂಕಿನ ಕುಡಿಯನೂರು, ಕೆ.ಜಿ.ಹಳ್ಳಿ ಮತ್ತು ಮಾಸ್ತಿ ಕ್ಲಸ್ಟರ್‌ಗಳ ಶಿಕ್ಷಕರು ಇಲ್ಲಿನ ಬ್ಯಾಂಕ್‌ನಿಂದ ವೇತನ ಪಡೆಯುತ್ತಿದ್ದಾರೆ. ಇತರೆ ಬ್ಯಾಂಕ್‌ಗಳಾದ ಎಸ್‌ಬಿಂಎಂ ಹಾಗೂ ಎಸ್‌ಬಿಎಚ್‌ಗಳಲ್ಲಿ ವೇತನಕ್ಕೆ ತಕ್ಕಂತೆ ಆರ್‌ಬಿಐ ನಿಯಮದಡಿ ಸಾಲವನ್ನು ನೀಡುತ್ತಿದ್ದಾರೆ. ಆದರೆ, ನಿಮ್ಮ ಬ್ಯಾಂಕ್‌ನಲ್ಲಿ ಕೇವಲ 6 ತಿಂಗಳ ವೇತನದಷ್ಟು ಮಾತ್ರ ಸಾಲ ನೀಡುತ್ತಿರುವುದರಿಂದ ಶಿಕ್ಷಕರ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕರೂಡನೆ ಉತ್ತಮ ಸಹಕಾರ ಮನೋಭಾವ ತೋರುವ ನಿಮ್ಮ ಬ್ಯಾಂಕ್ ನಲ್ಲಿ ಶಿಕ್ಷಕರ ವೇತನದ 24 ತಿಂಗಳಷ್ಟು ಸಾಲದ ಸೌಲಭ್ಯವನ್ನು ಅತಿ ಜರೂರಾಗಿ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಗೌರವಾಧ್ಯಕ್ಷ ಬಹದ್ದೂರು ಸಾಬ್, ಉಪಾಧ್ಯಕ್ಷ ವಿಜಯಕುಮಾರ್, ಟಿ.ಎಂ.ರಾಮಪ್ಪ, ಖಂಜಾಚಿ ಎಸ್.ಅಶ್ವತ್ಥ್ ನಾರಾಯಣಶೆಟ್ಟಿ, ಚಂದ್ರೇಗೌಡ, ರಾಧಾ ರುಕ್ಮಣಿಯಮ್ಮ, ಸಿ.ಎಂ.ಮಂಜುಳಾದೇವಿ, ಚಿಕ್ಕರಾಮಾಂಜನೇಯ,ನಜೀರ್, ಭಗತ್ ಸಿಂಗ್, ರಾಜಣ್ಣ, ಆರ್.ಎನ್.ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement