ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರೀನಿವಾಸಪುರ ತಾಲೂಕು ಸಮ್ಮೇಳನ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ

Srinivasa Murthy VN
Updated On : 2 Jun 2014, 1:44 am

ಕೋಲಾರ: ಮಾವಿನ ನಾಡಾದ ಶ್ರೀನಿವಾಸಪುರದಲ್ಲಿ ಜೂ.21ರಂದು ನಡೆಯಲಿರುವ 4ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಾಂಪಲ್ಲಿ ಚಂದ್ರಶೇಖರಯ್ಯನವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಮುನಿವೆಂಕಟೇಗೌಡ ಹಾಗೂ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಿದ್ದಾರೆ.
ತಾಲೂಕಿನ ಯಲ್ದೂರು ಗ್ರಾಮದಲ್ಲಿ ಈ ಬಾರಿ ಸಮ್ಮೇಳನ ನಡೆಸಲು ತಯಾರಿ ನಡೆಯುತ್ತಿದೆ. ಸಮ್ಮೇಳನದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ. ತಾಲೂಕು ಕಸಾಪ ಅಧ್ಯಕ್ಷ ಎನ್.ಮುನಿವೆಂಕಟೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಲ್ದೂರಿನ ಶೇ.80 ಹಾಗೂ ತಾಲೂಕಿನ ಶೇ.20ರಷ್ಟು ಕಾರ್ಯಕರ್ತರನ್ನು ಒಳಗೊಂಡ ಉಪ ಸಮಿತಿಗಳನ್ನು ರಚಿಸಲಾಗಿದೆ. ಯಲ್ದೂರು ನಾಡ ಕಚೇರಿಯ ಶಿರಸ್ತೇದಾರ್ ಮುನಿವೆಂಕಟಪ್ಪ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶಯ್ಯ, ಜಿಲ್ಲಾ ಸಂಚಾಲಕ ರವಿಕುಮಾರ್, ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜಲನಗರ ನಾರಾಯಣಸ್ವಾಮಿ, ತಾಲೂಕು ಗೌರವ ಕಾರ್ಯದರ್ಶಿ ಜಿ.ಎಸ್.ಚಂದ್ರಶೇಖರ್, ಕೋಶಾಧ್ಯಕ್ಷ ಮಂಜುಳ ಸಭೆಯಲ್ಲಿ ಹಾಜರಿದ್ದು ಸಮ್ಮೇಳನವನ್ನು ಯಶಸ್ವಿಯಾಗಿ,ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಿದರು.

ಅಕ್ರಮ ಮರಳು: ನಾಲ್ಕು ಟ್ರಾಕ್ಟರ್‌ಗಳು ವಶ
ಕೆಜಿಎಫ್: ಅಕ್ರಮ ಮರಳು ಸಾಗಿಸುತ್ತಿದ್ದ ನಾಲ್ಕು ಟ್ರಾಕ್ಟರ್‌ಗಳನ್ನು ಬೇತಮಂಗಲ ಠಾಣಾ ಪೊಲೀಸರು ವಶಪಡಿಸಿಕೊಂಡು ತಹಸೀಲ್ದಾರ್ ವಶಕ್ಕೆ ಒಪ್ಪಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಪಟ್ಟಣ ಸಮೀಪದ ಪಾಲಾರ್ ನದಿ ತೀರಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ. ಅದನ್ನು ಅಧಿಕಾರಿಗಳು ತಡೆಯುತ್ತಿಲ್ಲ ಎಂದು ಇಲ್ಲಿನ ರೈತ ಸಂಘ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರಿಗೆ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಬೇತಮಂಗಲ ಠಾಣಾ ಪೊಲೀಸರು ಮರಳು ದಂದೆ ನಡೆಸುತ್ತಿರುವ ಟ್ರಾಕ್ಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಗಾರಪೇಟೆ ತಹಸೀಲ್ದಾರ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಗೋವಿಂದ ತಿಳಿಸಿದ್ದಾರೆ. ನಾಲ್ಕು ಟ್ರಾಕ್ಟರ್‌ಗಳಿಗೆ ತಲಾ 10 ಸಾವಿರ ದಂಡವನ್ನು ತಹಸೀಲ್ದಾರ್ ವಿಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement