ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ರೈತ ಸಂಘ ಆಗ್ರಹ

Srinivasa Murthy VN
Updated On : 3 Jun 2014, 1:58 am

ಕೋಲಾರ: ಜಿಲ್ಲೆಯಾದ್ಯಂತ ಅಕ್ರಮ ಕಲ್ಲುಗಣಿಗಾರಿಕೆ, ಅನಧಿಕೃತ ಕ್ರಷರ್‌ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಭೂತಕ್ಕೆ ಪ್ರಕೃತಿ ಸಂಪತ್ತು ಲೂಟಿಯಾಗುತ್ತಿದೆ. ಬೆಟ್ಟಗಳನ್ನು 60 ರಿಂದ 100 ಅಡಿ ಆಳದವರೆಗೂ ಬಗೆದು ಕಂದಕಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಮುಖಂಡರು ಗಣಿ ಇಲಾಖೆಯ ಅಧಿಕಾರಿ ಸಂಪತ್ ಕೃಷ್ಣರವರಿಗೆ ಮನವಿ ಮೂಲಕ ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಗೌಡ,ಬಂಗವಾದಿ ನಾಗರಾಜಗೌಡ, ಮೂರಾಂಡಹಳ್ಳಿ ಶಿವಾರೆಡ್‌ಡಿ, ಹುಲ್ಕೂರು ಹರಿಕುಮಾರ್, ಮರಗಲ್ ಶ್ರೀನಿವಾಸ್ ಇತರರು ಇದ್ದರು. ಮನವಿ ಸ್ವೀಕರಿಸಿದ ಅಧಿಕಾರಿ ಸಂಪತ್‌ಕೃಷ್ಣ, ಪೊಲೀಸರ ಸಹಾಯದಿಂದ ಇನ್ನು 15ದಿನಗಳಲ್ಲಿ ದಾಳಿ ನಡೆಸಿ ಅಕ್ರಮಗಳನ್ನು ತಡೆಯುವುದಾಗಿ ಭರವಸೆ ನೀಡಿದರು.

ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಕೋಲಾರ: ಬಾಲಕಿಯ ಮದುವೆಯನ್ನು ಸಕಾಲಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಡೆದ ಘಟನೆ ನಗರದಲ್ಲಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ಇಲಾಖೆಯ ಸಿಬ್ಬಂದಿ ಭಾನುವಾರ ರಾತ್ರಿ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದರು. ಆಂಧ್ರಪ್ರದೇಶದ ಚಿತ್ತೂರಿನ ಬಳೆ ವ್ಯಾಪಾರಿ ಮಗಳನ್ನು ಆಕೆಯ ಸೋದರ ಮಾವನಿಗೆ ಮದುವೆ ಮಾಡಿಕೊಡಲು ಆರತಕ್ಷತೆ ಮುಗಿದಿತ್ತು. ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಯಿತು. 22 ವರ್ಷ ವಯಸ್ಸಿನ ಸೋದರ ಮಾವ ಜ್ರಾನೇಂದ್ರನಿಗೆ 17 ವರ್ಷ 10 ತಿಂಗಳು ತುಂಬಿದ ಹುಡುಗಿಯನ್ನು ಮದುವೆ ಮಾಡಲಾಗುತ್ತಿತ್ತು. ಈ ಮದುವೆಗೆ ಎರಡೂ ಕಡೆಯಯವರಿಂದ ಒಪ್ಪಿಗೆ ಇದ್ದರೂ ಕಾನೂನು ಪ್ರಕಾರ ಬಾಲಕಿಗೆ ಮದುವೆ ಮಾಡಲಾಗುವುದಿಲ್ಲ. ಮದುವೆ ವಯಸ್ಸಿಗೆ ಬಂದ ಮೇಲೆ ಮದುವೆ ಮಾಡಿ ಎಂದು ತಿಳಿ ಹೇಳಿ ಗಂಡು ಮತ್ತು ಹೆಣ್ಣಿನ ಕಡೆಯವರಿಂದ ಮುಚ್ಚಳಿಕೆ ಬರೆಸಿಕೊಂಡು ಮದುವೆ ತಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement