ಚಿಕ್ಕತಿರುಪತಿ ಅಭಿವೃದ್ಧಿಗೆ ಬದ್ಧ: ಮಂಜುನಾಥಗೌಡ
ಮಾಲೂರು: ಪುರಾಣ ಪ್ರಸಿದ್ಧ ಚಿಕ್ಕತಿರುಪತಿಯ ಪ್ರಸನ್ನ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಅವರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯ ಮುಂಭಾಗ ನೂತನವಾಗಿ ನಿರ್ಮಿಸಲಾಗುತ್ತಿರುವ 108 ಅಡಿಗಳ ರಾಜಗೋಪುರದ ಕೆಳ ಹಂತದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ದೇವಾಲಯದ ಮುಂಭಾಗದ ರಸ್ತೆಗಳನ್ನು ಅಗಲೀಕರಿಸಿ ಭಕ್ತರಿಗೆ ವಿಶಾಲವಾದ ಅವರಣ ನಿರ್ಮಿಸಿಕೊಡಲಾಗಿದೆ. ಭಕ್ತರಗಾಗಿ ಮೂಲಭೂತ ಸೌಕರ್ಯಗಳ ಜತೆಯಲ್ಲಿ ದೇವಾಲಯದ ಅಂದವನ್ನು ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ. ದೇವಾಲಯ ನಿಮಾರ್ಣಕ್ಕೆ ಪ್ರತಿಯೂಬ್ಬರ ಸಹಕಾರ ಅತ್ಯಗತ್ಯ ಎಂದರು.
ತಾಪಂ ಇಒ ಸಂಜೀವಪ್ಪ, ದೇವಾಲಯದ ಇಓ ಹಿರೇಮಠ್, ದೇವಾಲಯ ಸಮಿತಿಯ ಟಿ.ಆರ್.ವೆಂಕಟೇಶ್ ಗೌಡ, ಲಕ್ಕೂರು ವಿ.ಶ್ರೀನಿವಾಸ್, ಚಿಕ್ಕತಿರುಪತಿ ಪಂಚಾಯ್ತಿ ಅಧ್ಯಕ್ಷೆ ಶೈಲಜಾ ಬಾಲಕೃಷ್ಣ, ಉಪಾಧ್ಯಕ್ಷ ವಿ.ನಾಗೇಶ್, ಸದಸ್ಯ ಪಿಳ್ಳಪ್ಪ, ಧರಣಿ ಬಾಬು, ಅಂಚೆ ಮುಸ್ಕೂರು ಬಸಪ್ಪ, ಗುತ್ತಿಗೆದಾರ ನಾರಾಯಣಗೌಡ ಇದ್ದರು.
ವಿದ್ಯಾರ್ಥಿ ವೇತನ ವಿಳಂಬ: ಪ್ರತಿಭಟನೆ
ಚಿಂತಾಮಣಿ: ಪದವಿ ಪೂರ್ವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಾಡಲು ವಿಳಂಬ ಮಾಡುತ್ತಿರುವ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಬೇಕಾಗುವ ಎಲ್ಲಾ ದಾಖಲೆಗಳು ಕಾಲೇಜುಗಳ ಮೂಲಕ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಸಹ ಇದುವರೆಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೆಲವು ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಸಂಚಾಲಕ ಮಂಜುನಾಥರೆಡ್ಡಿ, ಸುರೇಶ್, ನವಾಜ್, ಲಕ್ಷ್ಮಣ್, ವಿಜಯ್ ಸೇರಿದಂತೆಅನೇಕರು ಭಾಗವಹಿಸಿದ್ದರು.