ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಒಡೆದ ಯುಜಿಡಿ

Srinivasa Murthy VN
Updated On : 12 Jun 2014, 1:37 am

ಮುಳಬಾಗಲು: ಯುಜಿಡಿಯಿಂದ ಹೊರ ಬಂದ ಹೊಲಸು ರಸೆಯಲ್ಲಿ ಆವರಿಸಿದ ಪರಿಣಾಮ ಪಟ್ಟಣದ ಮುತ್ಯಾಲಪೇಟೆ ನಿವಾಸಿಗಳು ಕಳೆದ ಮೂರು ದಿನಗಳಿಂದ ನರಕ ಅನುಭವಿಸುವಂತಾಗಿದೆ ಎಂದು ಬಸವರಾಜ್ ದೂರಿದ್ದಾರೆ. ಪುರಸಭೆಗೆ ದೂರು ಸಲ್ಲಿಸಿದರೂ ಸ್ಪ್ಟದಿಂಸಿಲ್ಲ. ಅನಧೀಕೃತ ಸಂಪರ್ಕ ನಿರ್ಮಿಸಿರುವ ಕಾರಣ ಸಮಸ್ಯೆ ಎದುರಾಗುತ್ತಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್. 9 ನೇವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ಆರೋಗ್ಯಾಧಿಕಾರಿ ಶಿವರೆಡ್ಡಿ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಯಿತು.

ರಸಗೊಬ್ಬರ ಮಾರಾಟ ಕೇಂದ್ರ ಉದ್ಘಾಟನೆ
ಚಿಂತಾಮಣಿ: ತಾಲೂಕಿನ ಮುಂಗಾನಹಳ್ಳಿ ಹೋಬಳಿ ವ್ಯಾಪ್ತಿಯ ಯಗವಮಿಂಡಿಗಲ್ ಗ್ರಾಮದಲ್ಲಿ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಟಿಎಪಿಸಿಎಂಎಸ್ ನಿರ್ದೇಶಕ ನಾ.ಶಂಕರ್ ರಸಗೊಬ್ಬರ ಮಾರಾಟ ಕೇಂದ್ರ ಉದ್ಘಾಟಿಸಿದರು.ಚಿಂತಾಮಣಿ ತಾಲ್ಲೂಕಿನ ನಂತರ ಮಾತನಾಡಿ, ಸಹಕಾರ ಸಂಘಕ್ಕೆ ಸುಮಾರು 26 ಗ್ರಾಮಗಳು ಒಳಪಟ್ಟಿದ್ದು ರೈತರು ನಾನಾ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಖರೀದಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಿ.ಎನ್.ಶ್ರೀನಿವಾಸಪ್ಪ, ಆರ್. ಶಿವಾರೆಡ್ಡಿ, ಎನ್. ಶಿವಪ್ಪ, ಮಮತಮಲ್ಲೇಗೌಡ, ಶ್ರೀನಿವಾಸರೆಡ್ಡಿ ಇದ್ದರು.

ಉತ್ತಮ ಮಳೆಗಾಗಿ ದೀಪೋತ್ಸವ
ಚಿಂತಾಮಣಿ: ಉತ್ತಮ ಮಳೆಗಾಗಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ, ಆಂಜನೇಯಸ್ವಾಮಿ, ಗಂಗಮ್ಮ, ಪೂಜಮ್ಮ, ಸಪಲಮ್ಮ ದೇವರಿಗೆ ದೀಪೋತ್ಸವ ಏರ್ಪಡಿಸಲಾಗಿತ್ತು. ತಾಲೂಕಿನ ಕಸಬಾ ಹೋಬಳಿ ನಾಯಿಂದ್ರಹಳ್ಳಿ ಕಾಲೋನಿಯಲ್ಲಿ ದೀಪಗಳನ್ನು ಬೆಳಗಲಾಯಿತು. ಈ ಸಂದರ್ಭದಲ್ಲಿ ನಾಯಿಂದ್ರಹಳ್ಳಿ ಕಾಲೋನಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್. ನರಸಿಂಹಪ್ಪ, ನಾರಾಯಣಸ್ವಾಮಿ, ಟಿ. ನಾರಾಯಣಸ್ವಾಮಿ ಇದ್ದರು.

ಖಾಸಗಿ ವಿದ್ಯಾ ಸಂಸ್ಥೆ ವಿರುದ್ಧ ಪ್ರತಿಭಟನೆ
ಚಿಂತಾಮಣಿ: ಚಿಂತಾಮಣಿ ಹೊರ ವಲಯದಲ್ಲಿರುವ ಕುರುಟಹಳ್ಳಿಯ ಸುಮಾಶ್ರೀ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ರಾಜಾರೋಷವಾಗಿ ಡೊನೇಶನ್ ವಸೂಲಿ ಮಾಡುತ್ತಿರುವುದರ ವಿರುದ್ಧ ವಿದ್ಯಾರ್ಥಿ, ಪೋಷಕರ ಹಿತ ರಕ್ಷಣೆ ವೇದಿಕೆ ಪ್ರತಿಭಟನೆ ನಡೆಸಿತು. ಶಾಲೆಯಲ್ಲಿ ಹಲವು ಸಮಸಯೆಗಳಿದ್ದರೂ ಕ್ರಮ ಕೈಗೊಂಡಿಲ್ಲ, ಸಾವಿರಾರು ರುಪಾಯಿ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಸಿಇಒ ನಿರ್ಮಲರನ್ನು ಬಿಸಿಲಲ್ಲಿ ನಿಲ್ಲಿಸಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟುಹಿಡಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು. ತಾಪಂ ಅಧ್ಯಕ್ಷೆ ಗೌರಮ್ಮನಾಗೇಶ್, ಬಾಲಾಜಿ, ಮಂಜುನಾಥ್, ಕುಮಾರ್ ಇದ್ದರು.

ಮೂರ್ತಿ, ಕಲ್ಬುರ್ಗಿ ಅಧಿಕ ಪ್ರಸಂಗ: ಖಂಡನೆ
ಮಾಲೂರು: ಅನಂತ ಮೂರ್ತಿ ಅವರ ಮೂತ್ರಿ ಪ್ರಸಂಗ ಹಾಗೂ ಕಲ್ಬುರ್ಗಿ ಅಧಿಕ ಪ್ರಸಂಗವನ್ನು ವಿರೋಧಿಸಿ ಸ್ಥಳೀಯ ಶ್ರೀ ರಾಮಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಸಿದ ಘಟನೆ ಬುಧವಾರ ನಡೆದಿದೆ.  ಪಟ್ಟಣದ ಮಾರಿಕಾಂಭ ಮಹಾದ್ವಾರ ವೃತ್ತ ಬಳಿಯ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಶ್ರೀ ರಾಮಸೇನೆ ಕಾರ್ಯಕರ್ತರು ದೇವರು-ನಂಬಿಕೆ ಮೇಲೆ ಅವಹೇಳನ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಯು.ಆರ್. ಅನಂತಮೂರ್ತಿ ಹಾಗೂ ಎಂ.ಎಂ.ಕಲಬುರ್ಗಿ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನೆಯ ಸಂಚಾಲಕ ಭರತ್ ಭೂಷಣ್ ಹಿಂದೂ ದೇವತೆಗಳು, ವಿಗ್ರರಾಧನೆ ಗಳ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡುತ್ತಿರುವ ನಿವೃತ್ತ ಕುಲಪತಿ ಎಂ.ಎಂ. ಕಲ್ಬುರ್ಗಿ, ಅನಂತ ಮೂರ್ತಿ ರಂತಹ ಬುದ್ಧಿ ಜೀವಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಪ್ಪಿರಾಜು, ಸೂರ್ಯನಾರಾಯಣ್,ಅಮರ್ ನಾರಾಯಣ್, ಕುಟ್ಟಿ ಮುನಿರಾಜು, ರಾಮಸೇನೆಯ ಸಂತೋಷ್, ಧರ್ಮಯ್ಯ, ಗೋಪಾಲ್,ಶ್ರೀನಿವಾಸ್, ಸತೀಶ್, ಮನೋಹರ, ಆನಂದ್ ಸೇರಿ ಅನೇಕರಿದ್ದರು.

ಡಿಸಿ ವರ್ಗಾವಣೆ ಬೇಡ; ಕರವೇ ಆಗ್ರಹ
ಮಾಲೂರು: ಜಿಲ್ಲಾಧಿಕಾರಿ ಡಿ.ಕೆ.ರವಿ ರವರನ್ನು ವರ್ಗಾಯಿಸದೆ ಜಿಲ್ಲೆಯಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ರಸ್ತೆ ತಡೆ ನಡೆಸಿ ನಂತರ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಕಾರ್ಯದರ್ಶಿ ದಯಾನಂದಶ್ರೀರಾಮುಲು, ಕೂಪ್ಪ ಚಂದ್ರು, ಸಿ.ವಿ.ಚಲಪತಿ, ಕೆ. ರಮೇಶ್, ಮಂಜು, ಸಾರಥಿ, ಮಂಜು ಪ್ರಸಾದ್, ಕಡತೂರು ಮಂಜು, ಆನಂದ್,ನಾರಾಯಣಸ್ವಾಮಿ, ರಮೇಶ್, ವೆಂಕಟೇಶ್, ವೇಣು, ಶಂಕರ್, ಅಗರ್ ಸುನೀಲ್, ಎಂ.ವಿ. ವೆಂಕಟೇಶ್, ಆಟೋ ರಮೇಶ್, ಗೀತಾ ಪ್ರಕಾಶ್, ಎಸ್.ಕೆ. ಶಿವಕುಮಾರ್ ಇದ್ದರು.

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಕೋಲಾರ: ಜುಲೈ 1 ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಯಾವುದೇ ಪದವಿಯ ಅಂತಿಮ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ. ಅಂಕಪಟ್ಟಿಯ ನಕಲು ಪ್ರತಿ ಹಾಗೂ ಭಾವಚಿತ್ರದೊಂದಿಗೆ ಜೂ. 20 ರೊಳಗೆ ಅರ್ಜಿಗಳನ್ನು ನಗರದ ಪತ್ರಕರ್ತರ ಭವನಕ್ಕೆ ತಲುಪಿಸಲು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ತಿಳಿಸಿದ್ದಾರೆ.

ಉತ್ತಮ ಮಳೆ: ಕೃಷಿ ಚಟುವಟಿಕೆ ಶುರು
ಮುಳಬಾಗಲು: ಕಳೆದ ವಾರ ಬಿದ್ದ ಮಳೆಯ ಕಾರಣವಾಗಿ ಮುಂಗಾರು ಚಟುವಟೆಕೆಗಳು ಗರಿಗೆದರಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ನೆಲಗಡಲೆಗೆ ಇಲ್ಲಿನ ರೈತರು ಹೆಚ್ಚಿನ ಒಲವು ತೊರಿಸುತ್ತಿದ್ದು, ನೆಲಗಡಲೆ ಬಿತ್ತನೆ ಬೀಜ ಕೃಷಿ ಇಲಾಖೆಯಿಂದ ಕ್ವಿಂಟಲ್‌ಗೆ ರು. 1,800ಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 200 ಕ್ವಿಂಟಲ್ ನೆಲಗಡಲೆ ಬಿತ್ತನೆ ಬೀಜ ಮಾರಾಟಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಬೀಜ ಸರಬರಾಜು ಮಾಡಲಾಗುವುದೆಂದು ಕೃಷಿ ಇಲಾಖೆ ಅಧಿಕಾರಿಗಳು ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement