ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲೆಟರ್‌ಹೆಡ್‌ಗಾಗಿ ಕೆಲಸ ಬೇಡ

Srinivasa Murthy VN
Updated On : 12 Jun 2014, 1:36 am

ಸಂಘಟನೆಗಳಿಗೆ ನವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿವಿಮಾತು
ಬಂಗಾರಪೇಟೆ: ಸಂಘಟನೆಗಳು ಬರೀ ಲೆಟರ್ ಹೆಡ್‌ಗಾಗಿ ಮಾತ್ರ ಕೆಲಸ ಮಾಡದೆ ಸಮಾಜದ ಶೋಷಿತರ ಪರವಾಗಿ ಧ್ವನಿಯಾದಾಗ ಮಾತ್ರ ಸಂಘಟನೆ ರಚಿಸಿದಕ್ಕೆ ಸಾರ್ಥಕ ಬರುತ್ತದೆ ಎಂದು ನವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಜಗೋಪಾಲ್ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳ ರಚನೆ ನಂತರ ಮಾತನಾಡುತ್ತಾ ಸಮಾಜದಲ್ಲಿ ಪ್ರತಿ ದಿನ ಹತ್ತಾರು ಸಂಘಟನೆಗಳು ಹುಟ್ಟುತ್ತಾವೆ ಅವುಗಳಲ್ಲಿ ಬಹುತೇಕವು ಕೇವಲ ಹೆಸರಿಗೆ ಮಾತ್ರ ಹುಟ್ಟಿಕೊಳ್ಳುವವು. ಆ ಪಟ್ಟಿಗೆ ನವ ಕರ್ನಾಟಕ ರಕ್ಷಣಾ ವೇದಿಕೆ ಸೇರುವುದು ಬೇಡ, ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಸಂಘಟನೆಗಳು ಶ್ರಮಿಸಿದಾಗ ಮಾತ್ರ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು. ತಾಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ ಒಣಗಿರುವ ಕೆರೆಗಳಲ್ಲಿ ವ್ಯಾಪಕವಾಗಿ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರೂ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದ್ದು ಒಂದು ವೇಳೆ ಅವರು ಕ್ರಮಕ್ಕೆ ಮುಂದಾಗದ ಪಕ್ಷ ನಮ್ಮ ಸಂಘಟನೆ ಕಾರ್ಯಕರ್ತರೇ ದಾಳಿ ಮಾಡಿ ಜಿಲ್ಲಾಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿಯಲ್ಲಿ ಪಟ್ಟಣದಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಸಹ ನಡೆಯುತ್ತಿದ್ದರೂ ಪೊಲೀಸರು ದಾಳಿ ಮಾಡದೆ ಅವರೊಂದಿಗೆ ಶಾಮೀಲಾಗಿದ್ದಾರೆ. ಈ ಧೋರಣೆಯಿಂದ ಹೊರ ಬಂದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟದಿದ್ದರೆ ಹೋರಾಟ ಮಾಡುವುದಾಗಿ ಪೊಲೀಸರಿಗೂ ಎಚ್ಚರಿಕೆ ನೀಡಿದರು. ಎಲ್ಲಿ ಅನ್ಯಾಯ ನಡೆಯುವುದೋ ಅಲ್ಲಿ ನವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇರುವರು ಸಮಾಜ ಘಾತುಕ ಶಕ್ತಿಗಳೇ ಎಚ್ಚರ ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಚಿನ್ನಿವೆಂಕಟೇಶ್, ಉಪಾಧ್ಯಕ್ಷ ಕೆ.ಸಿ. ಗೋಪಾಲ್, ತಾಲೂಕು ಅಧ್ಯಕ್ಷ ಕಣಿಂಬೆಲೆ ಶ್ರೀನಿವಾಸ್ ನಗರ ಪ್ರಧಾನಕಾರ್ಯದರ್ಶಿ ಸುಮಂತ್, ಮಧು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement