'ದುಡಿತಕ್ಕೆ ಮಕ್ಕಳ ಬಳಕೆ ಶಿಕ್ಷಾರ್ಹ'
ಗೌರಿಬಿದನೂರು: ಸಂವಿಧಾನ ಪ್ರಕಾರ ಬಾಲಾ ಕಾರ್ಮಿಕರ ಅಧಿನಿಯಮದಂತೆ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿತಕ್ಕೆ ಬಳಸುವುದು ಅಕ್ಷಮ್ಯ ಹಾಗೂ ಅಪರಾಧ ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶ ಬಿ. ಕೆ. ರವಿಕಾಂತ ಅಭಿಪ್ರಾಯಪಟ್ಟರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿಸಿ ಕಾನೂನು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಿಕ್ಷಣ ಎನ್ನುವುದು ಮನುಷ್ಯನಜೀವನದಲ್ಲಿ ಸಂಸ್ಕಾರ ಸಭ್ಯತೆ ಶಿಷ್ಟಾಚಾರ ಸಂಯಮ ಶಿಸ್ತು ತಂದುಕೊಡುತ್ತದೆ. ಬಾಲ್ಯದಲ್ಲೆ ಅಳವಡಿಸಿಕೊಂಡರೆ ನಮ್ಮ ಬಾಳು ಹಸನಾಗುತ್ತದೆ. ಮಕ್ಕಳನ್ನು ಶಿಕ್ಷಣದಿಂದ ವಂಚಸಿ ದುಡಿತಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಡಾ. ಎನ್. ಭಾಸ್ಕರ್ ಸಿಡಿಪಿಒ ಜಯಲಕ್ಷ್ಮಮ್ಮ ಪುರಸಭೆ ಮುಖ್ಯ ಅಧಿಕಾರಿ ಹನುಮಂತೇಗೌಡ, ಅಬಕಾರಿ ನಿರೀಕ್ಷಕ ನಾರಾಯಣಪ್ಪ ಮುಂತಾದವರು ಭಾಗವಹಿಸಿದ್ದರು. ಸಿ.ಎನ್ ಕೃಷ್ಣಪ್ಪ ಸ್ವಾಗತಿಸಿದರು. ಮುನಿರಾಜು ವಂದಿಸಿದರು.