ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಬದಿ ಡಾ.ರಾಜ್ ಪುತ್ಥಳಿ ಅನಾಥ!

Srinivasa Murthy VN
Updated On : 14 Jun 2014, 12:39 pm

ಮಾಲೂರು: ಸುಂದರವಾಗಿ ಬಂದಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿನ ಪುರಸಭೆ ಆವರಣದಲ್ಲಿ ಸ್ಥಾಪಿತವಾಗಿದ್ದ ನಟ ಡಾ.ರಾಜ್ ಪ್ರತಿಮೆ ಬದಲಾಯಿಸಿದ ಭುವನೇಶ್ವರಿ ಕಲಾ ಸಂಘ, ಅದನ್ನು ತಾಲೂಕಿನ ಮಡಿವಾಳ ಗ್ರಾಮದ ಚರಂಡಿ ಬದಿ ಬೀಸಾಕಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
2002ರ ಜೂನ್ 24 ರಂದು ಸ್ಥಳೀಯ ಭುವನೇಶ್ವರಿ ಕಲಾ ಸಂಘ ಡಾ. ರಾಜ್ ಅವರ ಕಪ್ಪುಶಿಲೆ ಪ್ರತಿಮೆಯನ್ನು ಇಲ್ಲಿನ ಪುರಸಭೆ ಆವರಣದಲ್ಲಿ ಸ್ಥಾಪಿಸಿತ್ತು. ಇದನ್ನು ರವಿಶಂಕರ್ ಗೂರುಜಿ ಹಾಗೂ ಬಾಲಗಂಗಾಧರನಾಥ್ ಸ್ವಾಮೀಜಿ ಅನಾರವಣಗೊಳಿಸಿದ್ದರು. ಈ ವೇಳೆ, ರಾಜ್ ಕುಟುಂಬದ, ಶಿವಣ್ಣ, ರಾಘಣ್ಣ, ಪುನೀತ್ ಹಾಗೂ ಪಾರ್ವತಮ್ಮ ಕೂಡಾ ಬಂದಿದ್ದರು. ನಂತರ ಈ ಪ್ರತಿಮೆಗೆ ಬಗ್ಗೆ ಆಕ್ಷೇಪ ಬಂದ ಹಿನ್ನೆಲೆಯಲ್ಲಿ  ಭುವನೇಶ್ವರಿ ಕಲಾ ಸಂಘದ ಹಿರಿಯ ಸದಸ್ಯ ಹಾಗೂ ಚಲನಚಿತ್ರ ನಟ ಸಿದ್ದಪ್ಪ ಅವರ ಪರಿಶ್ರಮದಿಂದಾಗಿ ಕಳೆದ ವರ್ಷ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಇದೀಗ ಹಳೆ ಪ್ರತಿಮೆ ಬೆಂಗಳೂರು ರಸ್ತೆಯ ಮಡಿವಾಳ ಗ್ರಾಮದ ರಸ್ತೆ ಪಕ್ಕದಲ್ಲಿ ಅನಾಥವಾಗಿ ಬಿದ್ದಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆವಾಂತರಕ್ಕೆ ಭುವನೇಶ್ವರಿ ಕಲಾ ಸಂಘವೇ ಹೊಣೆ ಎಂದು ಗ್ರಾಮದ ನಿವಾಸಿ ಜೈರಾಮ್ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘದ ಮುಖ್ಯಸ್ಥ ಲಿಂಗೇಶ್ವರಯ್ಯ, ಡಾ.ರಾಜ್ ಪುತ್ಥಳಿಯನ್ನು ಮಡಿವಾಳ ಗ್ರಾಮದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಸ್ಥಾಪಿಸುತ್ತೇವೆ ಎಂದು ರಾಜ್ ಅಭಿಮಾನಿ ನಾರಾಯಣಸ್ವಾಮಿ ತೆಗೆದುಕೊಂಡು ಹೋಗಿದ್ದರು. ಆದರೆ, ಅದನ್ನು ರಸ್ತೆ ಬದಿಯಲ್ಲಿ ಬೀಸಾಕಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement