ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಬ್ಬರು ಮಹಿಳೆಯರು ಸೇರಿ ನಾಲ್ವರ ಮೇಲೆ ಹಲ್ಲೆ

Srinivasa Murthy VN
Updated On : 15 Jun 2014, 11:49 am

ಶಿಡ್ಲಘಟ್ಟ: ಮನೆಯ ಮುಂದಿನ ಖಾಲಿ ಜಾಗದಲ್ಲಿ ಹಾದು ಹೋಗದಂತೆ ತಡೆದಿದ್ದಕ್ಕಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತಾಲೂಕಿನ ವೈ.ಹುಣಸೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಗೊಲ್ಲಹಳ್ಳಿ ಗ್ರಾಮದಲ್ಲಿ ಆನಂದಮ್ಮ ಎಂಬ ಮಹಿಳೆ ತನ್ನ ಮನೆಯ ಮುಂದೆ ಟ್ಯಾಕ್ಟರ್‌ನಲ್ಲಿ ಇಟ್ಟಿಗೆಯನ್ನು ಸಾಗಿಸುತ್ತಿದ್ದ ತನ್ನ ಗಂಡನ ದಾಯಾದಿಗಳನ್ನು ಮನೆಯ ಮುಂದೆ ಟ್ರಾಕ್ಟರ್ ತರಬಾರದೆಂದು ತಡೆದಿದ್ದಾರೆ. ಇದರಿಂದ ಕುಪಿತಗೊಂಡ ದಾಯಾದಿ ಕೃಷ್ಣಪ್ಪ ಮತ್ತು ತನ್ನ ಸಹಚರರು ಏಕಾಏಕಿ ರಾಡ್ ಮತ್ತು ಮಚ್ಚನ್ನು ಹಿಡಿದುಕೊಂಡು ಆನಂದಮ್ಮಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದಿದ್ದ ಆನಂದಮ್ಮನ ಮೈದುನ ಹಾಗೂ ಆತನ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ವಿಚಾರಿಸಲು ಹೋದ ಆನಂದಮ್ಮನ ಗಂಡನ ಮೇಲೂ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಹ್ನಿಕುಲ ಗೌಡರು, ಯಜಮಾನರ ನೇಮಕ
ಬಂಗಾರಪೇಟೆ: ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯಲ್ಲಿ ಉಂಟಾಗಿದ್ದ ಕಲಹ ಬಹುತೇಕ ಶಮನಗೊಂಡಿದ್ದು, ಕುಲದ ಗೌಡರು ಹಾಗೂ ಯಜಮಾನರನ್ನು ನೇಮಕ ಮಾಡುವಲ್ಲಿ ರಾಜ್ಯ ವಹ್ನಿಕುಲ ಸಮುದಾಯದ ಮುಖಂಡರು ಸಫಲರಾಗಿದ್ದಾರೆ.
ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ವಹ್ನಿಕುಲ ಸಮುದಾಯದ ರಾಜ್ಯ ಮುಖಂಡರಾದ ಎಲ್.ಎ.ಮಂಜುನಾಥ್, ಜಿಲ್ಲಾಧ್ಯಕ್ಷ ಉದಯ್‌ಕುಮಾರ್ ನೇತೃದಲ್ಲಿ ನೆಡದ ಸಭೆಯಲ್ಲಿ ಸಮುದಾಯದ ಮುಖಂಡರಾದ ಕೆರೆಕೋಡಿ ಜಯರಾಂ ಗೌಡರಾಗಿ, ತಿಮ್ಮರಾಯಪ್ಪ ಯಜಮಾನರಾಗಿ ಹಾಗೂ ರಾಜು ಎಂಬುವರನ್ನು ಧರ್ಮರಾಯಸ್ವಾಮಿ ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
 ಸಭೆಯಲ್ಲಿ ಸಮುದಾಯದ ಮುಖಂಡರಾದ ಗೋವಿಂದರಾಜು, ಕುಮರೇಶ್, ಐನೋರಹೊಸಹಳ್ಳಿ ಗೋಪಾಲ್, ಚಿನ್ನವೆಂಕಟೇಶ್,ತಿಮ್ಮರಾಯಪ್ಪ, ಕೆರೆಕೋಡಿ ಜಯರಾಂ, ರೇಲ್ವೆ ಕುಮಾರ್, ಕಾರಹಳ್ಳಿ ಶ್ರೀನಿವಾಸ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement