ಶಿಕ್ಷಕರು ತಮ್ಮ ಜವಾಬ್ದಾರಿ ಅರಿಯಬೇಕು: ನಟೇಶ್
ಶಿಡ್ಲಘಟ್ಟ: ಗುರುಗಳು ಮಕ್ಕಳಿಗೆ ವಿದ್ಯೆ ಧಾರೆಯೆರೆಯುವಾಗ ತಮ್ಮ ಮೇಲಿರುವ ಜವಾಬ್ದಾರಿಯನ್ನು ಅರಿಯಬೇಕು ಎಂದು ಮುಖ್ಯ ಶಿಕ್ಷಕ ನಟೇಶ್ ಹೇಳಿದರು.
ತಾಲೂಕಿನ ಕಾಳಿನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಅವರನ್ನು ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿಗಳು, ಯುವಕರು ಬೀಳ್ಕೊಡುಗೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ವ್ಯಕ್ತಿ ಉನ್ನತ ಸ್ಥಾನವನ್ನು ಅಲಂಕರಿಸಬೇಕಾದರೆ ತಂದೆ, ತಾಯಿ ಹಾಗೂ ಗುರುಗಳ ಪಾತ್ರ ಮಹತ್ತರ. ಅವಲ್ಲಿರುವ ಜ್ಞಾನವನ್ನು ತಮ್ಮ ಬಳಿಗೆ ಬರುವ ಮಕ್ಕಳಿಗೆ ಧಾರೆಯೆರೆದು ಅವರನ್ನು ಪ್ರಬುದ್ಧರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ನನ್ನ ನಿವೃತ್ತಿ ಕೂಡಾ ಇದೇ ಶಾಲೆಯಲ್ಲಾಗಲಿ ಎಂದು ಭಾವುಕರಾದರು. ಗ್ರಾಮದ ಮುಖಂಡ ರಮೇಶ್ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಸದಸ್ಯ ರಾಜಣ್ಣ, ಭೀಮೇಶ್, ಕೆ.ಮಂಜಯ್ಯ, ಕೃಷ್ಣಪ್ಪ, ರಾಮಚಂದ್ರಪ್ಪ, ಜಗನ್ನಾಥ್, ಪ್ರಭಾರಿ ಮುಖ್ಯಶಿಕ್ಷಕ ಶಿವಕುಮಾರ್, ಶಿಕ್ಷಕರಾದ ಭಾರತಿ, ಶಿವಕುಮಾರ್, ಶಿಲ್ಪ, ಸುಧಾಮಣಿ ಸೇರಿ ಅನೇಕರು ಹಾಜರಿದ್ದರು.