ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂತಾರಾಜ್ಯ ಬೈಕ್ ಕಳ್ಳನ ಬಂಧನ

Srinivasa Murthy VN
Updated On : 17 Jun 2014, 12:48 pm

ಮುಳಬಾಗಲು: ನಕಲಿ ಕೀ ಬಳಸಿ  ದ್ವಿಚಕ್ರವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆಂಧ್ರ ಪ್ರದೇಶದ ವಿಕೋಟ ಬಳಿಯ ಕಸ್ತೂರಿ ನಗರದ ಮೋಹನ್ ಅಲಿಯಾಸ್ ಮನು(23) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಲು, ಶ್ರೀನಿವಾಸಪುರ, ಆಂಧ್ರದ ಚಿತ್ತೂರು, ಪಲಮನೇರು, ಕುಪ್ಪಂ ಮುಂತಾದ ಪಟ್ಟಣಗಳಲ್ಲಿ ಆರೋಪಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದನು.  ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಯನ್ನು ಮುಳಬಾಗಲು ಪೊಲೀಸರು ತಡೆದು ನಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕಣಗಳು ಬೆಳಕಿಗೆ ಬಂದವು.
26 ಬೈಕ್ ವಶ: ಆರೋಪಿ ವಿವಿಧ ಕಡೆ ಕಳವು ಮಾಡಿ ಮಾರಾಟ ಮಾಡಿದ್ದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ 26 ದ್ವಿಚಕ್ರ ವಾಹನಗಳನ್ನು   ವಶಪಡಿಸಿಕೊಂಡಿದ್ದಾರೆ. ಆರೋಪಿ ಮೋಹನನನ್ನು ಸೋಮವಾರ ಮುಳಬಾಗಲು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ನಂತರ ಮಾತನಾಡಿದ ಕೋಲಾರ ಅಡಿಷನಲ್ ಎಸ್ಪಿ ಎಂ.ಐ. ಜಮೀರ್   ಅಪರಾದ ವಿಭಾಗದ ಸಿಬ್ಬಂದಿಯನ್ನು ಶ್ಲಾಘಿಸಿದರು.  ಕೋಲಾರ ಎಸ್ಪಿ ಅಜಯ್ ಹಿಲೋರಿ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಪ್ಪ, ಅಪರಾಧ ವಿಭಾಗದ ಎಸ್‌ಐ, ಶಂಕರಪ್ಪ ಸಬ್ ಇನ್ಸ್‌ಪೆಕ್ಟರ್ ಫ್ರಾನ್ಸಿಸ್, ಸಿಬ್ಬಂದಿ ಅಮರನಾರಾಯಣ, ಎನ್.ಸಿ. ಗುರುಪ್ರಸಾದ್, ಎಂ.ರಮೇಶ್, ಎನ್.ರಾಮಪ್ಪ, ವಿ.ಎಚ್. ಮಂಜುನಾಥರೆಡ್ಡಿ, ಇ.ಎನ್. ನಾಗರಾಜ್, ಎಸ್.ವಿನಾಯಕ, ಸುರೇಶ್ ಅವರುಗಳು ದ್ವಿಚಕ್ರವಾಹನಗಳ ಪತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement