ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜನಪ್ರತಿನಿಧಿಗಳೇ ತಿಮ್ಮಂಪಲ್ಲಿ ರಸ್ತೆಯಲ್ಲಿ ಒಮ್ಮೆ ಓಡಾಡಿ ಪ್ಲೀಸ್

Srinivasa Murthy VN
Updated On : 17 Jun 2014, 12:52 pm

ಬಾಗೇಪಲ್ಲಿ: ಕಾರ್ಯ ನಿರ್ವಹಿಸಬೇಕಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿದ್ದೆಗೆ ಶರಣಾದರೆ ಸಾರ್ವಜನಿಕರ ಜೀವನ ಹೇಗಿರುತ್ತೆ ಎನ್ನುವುದಕ್ಕೆ ಬಾಗೇಪಲ್ಲಿಯಿಂದ ಬಿಳ್ಳೂರಿಗೆ ಹೋಗುವ ಮಾರ್ಗ ಮಧ್ಯೆ ಬರುವಂತಹ ಗ್ರಾ.ಪಂ.ಕೇಂದ್ರದಲ್ಲಿನ (ತಾಲೂಕಿನ ಗೂಳೂರು ಹೋಬಳಿ)ತಿಮ್ಮಂಪಲ್ಲಿ ಗ್ರಾಮದ ರಸ್ತೆಯೇ ಸಾಕ್ಷಿಯಾಗಿದೆ.
ಈ ಗ್ರಾಮದ ನಡುವೆ ಹಾದು ಹೋಗುವ ಪ್ರಮುಖ ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು. ಈ ರಸ್ತೆಯಲ್ಲಿನ ಹೊಂಡಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಈ ರಸ್ತೆಯ ಮೂಲಕ ಚಲಿಸುವಂತಹ ವಾಹನ ಸವಾರರು ಯಾವುದು ರಸ್ತೆ, ಯಾವುದು ಹೊಂಡ ಎಂಬುದು ತಿಳಿಯದೇ ಪರದಾಡುವಂತಹ ಪರಿಸ್ಥಿತಿ ಒಂದು ಕಡೆಯಾದರೆ ಇನ್ನೊಂದು ಕಡೆ ಈ ರಸ್ತೆ ಕೆಸರು ಗದ್ದೆಯಾಗಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಓಡಾಡಲು ತುಂಬಾ ಕಿರಿಯಾಗುತ್ತಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ಅಧಿಕಾರಿಗಳಿಗೆ, ಗ್ರಾ.ಪಂ. ಆಡಳಿತ ಯಂತ್ರಾಂಗ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರು. ಬಿಡುಗಡೆಗೊಳಿಸುತ್ತಿದೆ. ಆದರೆ, ಇಲ್ಲಿ ರಸ್ತೆಗಳು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ. ಸರ್ಕಾರದಿಂದ ಬರುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಸಾರ್ವಜಕನಿಕರ ಪ್ರಶ್ನೆಯಾಗಿದೆ. ತಾಲೂಕು ಕೇಂದ್ರವಾಗಿರುವ ಬಾಗೇಪಲ್ಲಿಯಿಂದ ತಿಮ್ಮಂಪಲ್ಲಿ ಮಾರ್ಗವಾಗಿ ಬಿಳ್ಳೂರು, ಚಾಕವೇಲು, ಚೇಳೂರು ಸೇರಿದಂತೆ ಆಂಧ್ರಪ್ರದೇಶದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಂತಿದೆ ಈ ರಸ್ತೆ. ಇದರ ದುಸ್ಥಿತಿಯ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಜಾಣನಿದ್ದೆಯಿಂದ ಹೊರಗೆ ಬಂದು ಇಲ್ಲಿನ ರಸ್ತೆಯನ್ನು ಸರಿಪಡಿಸಬೇಕೆಂದು ಜನ ಆಗ್ರಹಿಸಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement