ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಸ್ಯೆ ಬಗೆಹರಿಸಲು ಚೌಡರೆಡ್ಡಿ ಗೆಲ್ಲಬೇಕು: ಮಂಜುನಾಥ್‌ಗೌಡ

Srinivasa Murthy VN
Updated On : 17 Jun 2014, 12:52 pm

ಮಾಲೂರು: ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿರುವ ಚೌಡರೆಡ್ಡಿ ಅವರನ್ನು ಗೆಲ್ಲಿಸುವಂತೆ ಮತದಾರರಿಗೆ ಶಾಸಕ ಮಂಜುನಾಥ್‌ಗೌಡ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲ ಚೌಡರೆಡ್ಡಿ ಅವರು ನಮ್ಮ ಜಿಲ್ಲೆಯವರು. ಜನಪ್ರತಿನಿಧಿಗಳು ಸ್ಥಳೀಯರಾಗಿದ್ದರೆ, ನಮ್ಮ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧ ಹಾಗೂ ವಿಧಾನ ಪರಿಷತ್‌ನಲ್ಲಿ ಶಿಕ್ಷಕರು ಹಾಗೂ ಪದವೀಧರ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಈಗ ಚೌಡರೆಡ್ಡಿ ಅವರ ಗೆಲವು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಆಸ್ತಿ ತೆರವು: ಪಟ್ಟಣದ ಅರಳೇರಿ ರಸ್ತೆಯ ಆದರ್ಶ ನಗರದ ರಾಜಾ ಕಾಲುವೆಗಳಲ್ಲಿ ನಿರ್ಮಾಣವಾಗಿರುವ, 150 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಗಳ ತೆರವು ಅನಿವಾರ್ಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ, ಪಟ್ಟಣದಲ್ಲಿರುವ ಸಿಎ ಸೈಟ್ ಗಳಲ್ಲಿ ನಿರ್ಮಾಣ ವಾಗಿರುವ ಕಟ್ಟಡಗಳಿಗೂ ಕುತ್ತು ಬರಲಿದೆ ಎಂದು ತಿಳಿಸಿದರು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್‌ಗೌಡ, ಕೋಚಿಮುಲ್ ನಿರ್ದೇಶಕ ನಂಜೇಗೌಡ, ಪುರಸಭೆ ಸದಸ್ಯರಾದ ಅಲೂಮಂಜುನಾಥ್, ಜಾಕೀರ್‌ಖಾನ್ ಹಾಗೂ ಮುಖಂಡ ಚಿ.ರಾಮಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement