ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎತ್ತಿನಹೊಳೆ ವಿರೋಧಿಸಿ ರೈತ ಸಂಘದ ಪ್ರತಿಭಟನೆ

Srinivasa Murthy VN
Updated On : 4 Mar 2014, 12:55 pm

ಕನ್ನಡಪ್ರಭವಾರ್ತೆ, ಕೋಲಾರ, ಮಾ.3
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿ ಜನತೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡ ಎತ್ತಿನ ಹೊಳೆ ಶಂಕುಸ್ಥಾಪನೆಯನ್ನು ವಿರೋಧಿಸುವ ಸಲುವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ ಮುಖಂಡರು, ಜನಪ್ರತಿನಿಧಿಗಳ ಮುಖವಾಡಗಳನ್ನು ಧರಿಸಿ ಖಾಲಿ ಪೈಪುಗಳಿಗೆ ಪೂಜೆ ಸಲ್ಲಿಸುವ ಮೂಲಕ ಸದರಿ ಯೋಜನೆಯ ಸ್ಥಿತಿಯೂ ಇದೇ ರೀತಿ ಮುಂದುವರೆಯಲಿದ್ದು ನೀರು ಮಾತ್ರ ಸಿಗುವುದಿಲ್ಲವೆಂದು ದೂರಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಕಳೆದ ದಶಕದಿಂದ ನಿರಂತರವಾಗಿ ಹೋರಾಟಗಳು, ಪಾದಯಾತ್ರೆಗಳು ನಡೆಸಿಕೊಂಡು ಬರುತ್ತಿದ್ದರೂ ಸರಕಾರ ಮಾತ್ರ ಈ ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರ ಪರಮಶಿವಯ್ಯ ವರದಿಗೆ ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಕಂಪನಿಗೆ ಟೆಂಡರ್ ನೀಡಿ, ನಂತರ ಅದನ್ನು ಮೂಲೆ ಗುಂಪು ಮಾಡಲು ಹೊರಟಿದ್ದಾರೆ ಎಂದು ದೂರಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ನೀರಾವರಿಯ ಹೆಸರನಲ್ಲಿ ಸತತ ಎರಡು ಚುನಾವಣೆಗಳಲ್ಲಿ ಓಟ್‌ಬ್ಯಾಂಕ್ ರಾಜಕೀಯ ಮಾಡಿಕೊಂಡು ಜನರನ್ನು ಯಾಮಾರಿಸಿಕೊಂಡು ಕಾಲಕಳೆಯುತ್ತಿದ್ದಾರೆ ಎಂದು ದೂರಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪರಮಶಿವಯ್ಯ ವರದಿಯನ್ನು ಮೂಲೆಗುಂಪು ಮಾಡಿ ಎತ್ತಿನ ಹೊಳೆ ಎಂಬ ಯೋಜನೆಯನ್ನು ತರುವುದರ ಮೂಲಕ  ಇಲ್ಲಿನ ಜನರನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ ಎಂದು ಅಪಾದಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಹೂಳನ್ನು ತೆಗೆಯಲು ವಿಶೇಷ ಅನುದಾನ ನೀಡಬೇಕು ಮತ್ತು ಸಮರೋಪಾದಿಯಲ್ಲಿ ಕೆರೆಗಳ ಹೂಳನ್ನು ತೆಗೆಯಬೇಕು ಮತ್ತು ಒತ್ತುವರಿಯನ್ನು ತೆರವುಗೊಳಿಸಬೇಕು, ಬರಪೀಡಿತ ಜಿಲ್ಲೆಯ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತನೆ ಮಾಡಬೇಕು, ಸಾಲ ವಸೂಲಿ ಹೆಸರಿನಲ್ಲಿ ಬ್ಯಾಂಕುಗಳ ರೈತರಿಗೆ ಸುಸ್ತೀದಾರರೆಣದಯ ಅವಮಾನ ಮಾಡುವುದನ್ನು ನಿಲ್ಲಿಸಬೆಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸೇನೆಯ ಜಿಲ್ಲಾಧ್ಯಕ್ಷ ಕೆ. ಶ್ರೀನಿವಾಸಗೌಡ, ರೈತ ಸಂಘ ಜಿಲ್ಲಾಧ್ಯಕ್ಷ ನಾರಾಯಣಗೌಡ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ತಾಲೂಕು ಅಧ್ಯಕ್ಷ ಮುನೇಗೌಡ, ನೀಲಕಂಠಪುರ ಮುನೇಗೌಡ, ಕೆಂಬೋಡಿ ಕೃಷ್ಣೇಗೌಡ, ಬಂಗವಾದಿ ನಾಗರಾಜ್‌ಗೌಡ, ರಾಜೇಶ್, ಮಂಜುನಾಥ್, ರಂಜಿತಕುಮಾರ್, ಸಾಗರ ವಿಕ್ರಂ, ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement