ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮನೆ ನಿರ್ಮಾಣಕ್ಕೆ ಹಕ್ಕು ಪತ್ರ ವಿತರಣೆ

Srinivasa Murthy VN
Updated On : 4 Mar 2014, 12:56 pm

ಬಂಗಾರಪೇಟೆ: ಕ್ಷೇತ್ರದಲ್ಲಿ ಅನೇಕ ಮಂದಿ ಸೂರಿಲ್ಲದೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದು ಅಂತಹವರನ್ನು ಗುರ್ತಿಸಿ ಮನೆ ನಿರ್ಮಾಣ ಮಾಡಿಕೊಡುವುದೇ ಸರ್ಕಾರದ ಗುರಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 60ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಹಕ್ಕು ಪತ್ರ ವಿತರಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 75 ಸಾವಿರದಿಂದ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೆ ಏರಿಕೆ ಮಾಡಿದೆ. ಅಲ್ಲದೆ ಬಿಜೆಪಿ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದದ್ದ ಆಶ್ರಯ ಮನೆಗಳಿಗೆ ಈ ಸರ್ಕಾರ ಮತ್ತೆ ಜೀವ ನೀಡಿದೆ ಎಂದರು. ಪುರಸಭೆ ಸದಸ್ಯ ಕೆ. ಚಂದ್ರಾರೆಡ್ಡಿ, ಭಾಗ್ಯಮ್ಮ, ಅಣ್ಣಾದೊರೆ, ಆರೋಕ್ಯ ರಾಜನ್, ಸಾದಿಕ್, ಹೊಸರಾಯಪ್ಪ, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಇದ್ದರು.

ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಮಾಲೂರು: ಕುಡಿಯುವ ನೀರಿಗೆ ಅಗ್ರಹಿಸಿ ವಾರ್ಡ್ ಸದಸ್ಯ ತಮ್ಮ ವಾರ್ಡ್ ನಿವಾಸಿಗಳ ಜತೆ ಇಲ್ಲಿನ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ 22 ನೇ ವಾರ್ಡ್ ಸದಸ್ಯ ಜೆಡಿಎಸ್‌ನ ಮಾಲಾದ್ರಿ ಕಳದೆ ಹದಿನೈದು ದಿನದಿಂದ ತೀವ್ರವಾಗಿರುವ ಕುಡಿಯುವ ನೀರಿನ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿರುವುದನ್ನು ವಿರೋಧಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ವಾರ್ಡ್‌ಗೆ ಬರುತ್ತಿದ್ದ ನೀರಿನ ಫೈಪು ತುಂಡಾಗಿದ್ದು,ನೀರಿಲ್ಲದೆ ಎರಡು ವಾರವಾಗಿದೆ. ಈ ಬಗ್ಗೆ ಹಲವು ಬಾರಿ ಇಲ್ಲಿನ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆ ಸದಸ್ಯನ ದೂರಿಗೆ ಸ್ಪಂದಿಸುವ ಸೌಜನ್ಯ ಅಧಿಕಾರಿಗಳು ತೋರುತ್ತಿಲ್ಲ ಎಂದು ಅಪಾದಿಸಿದರು. ವಾರ್ಡ್‌ನ ಮುದ್ದಮ್ಮ, ಕವಿತಾ, ದೇವಿ, ಮಂಜುಳ, ಸೌಮ್ಯ, ಮಧುರ, ಮಂಗಳ, ಪ್ರೇಮಾ, ಸಂಧ್ಯಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement