ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಾಲಕ, ನಿರ್ವಾಹಕನ ಮೇಲೆ ಹಲ್ಲೆ: ದೂರು ದಾಖಲು

Srinivasa Murthy VN
Updated On : 10 Mar 2014, 1:55 am

ಚಿಂತಾಮಣಿ: ಕಾರ್ಯನಿರತ ಕೆಎಸ್‌ಆರ್ಟಿಸಿ ನಿರ್ವಾಹಕ ಮತ್ತು ಚಾಲಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಚೊಕ್ಕನಹಳ್ಳಿ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ. ಚಿಂತಾಮಣಿ - ಬುರುಡಗುಂಟೆ ಮಾರ್ಗದ ನಿರ್ವಾಹಕ ರಘುರಾಮ್‌ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾಗ ಚೊಕ್ಕನಹಳ್ಳಿ ಕ್ರಾಸ್ ಬಳಿ ಬಸ್ ಹತ್ತಿದ ದೇವಪ್ಪ ಎಂಬವರು 500 ರುಪಾಯಿ ನೀಡಿ ಚಿಲ್ಲರೆ ಕೇಳಿದ್ದು, ಈ ವಿಷಯವಾಗಿ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಮಧ್ಯ ಪ್ರವೇಶಿಸಿದ ಚಾಲಕ ಆಂಜಪ್ಪರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಿರ್ವಾಹಕ ಮತ್ತು ಚಾಲಕ ಚಿಂತಾಮಣಿ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರಿಗೆ ದೂರು: ಸಮವಸ್ತ್ರದಲ್ಲಿದ್ದ ಕಾರ್ಯನಿರತ ನಿರ್ವಾಹಕ ರಘುರಾಮ್‌ರೆಡ್ಡಿ ಮತ್ತು ಚಾಲಕ ಆಂಜಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಟಿಕೆಟ್ ಹಂಚುವ ಯಂತ್ರ ನಾಶಪಡಿಸಿ, ಕೈಚೀಲದಲ್ಲಿದ್ದ 3,500 ರುಪಾಯಿಗಳ ಕಳ್ಳತನ ಮಾಡಿರುವುದಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದು ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ವೆಂಕಟೇಶ್ ಮತ್ತು ಸಹಾಯಕ ಸಂಚಾರಿ ನಿರೀಕ್ಷಕ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರಿಗಾದ ಅನ್ಯಾಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement