ಟೇಕಲ್‌ನಲ್ಲಿ ಬಸ್ ನಿಲ್ದಾಣವಿಲ್ಲದೆ ಪರದಾಟ
ಟೇಕಲ್ ಲಕ್ಷ್ಮೀಶ್
ಟೇಕಲ್: ಟೇಕಲ್‌ನಲ್ಲಿ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
5 ವರ್ಷಗಳ ಹಿಂದೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಟೇಕಲ್‌ಗೆ ಭೇಟಿ ನೀಡಿದಾಗ ಉತ್ತಮ ಬಸ್ ನಿಲ್ದಾಣ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಆ ಮಾತು ಸುಳ್ಳಾಗಿದೆ.
ತಂಗುದಾಣವಿಲ್ಲ: ಸುಮಾರು 40 ವರ್ಷದಿಂದ ಯಾವುದೇ ತಂಗುದಾಣವಿಲ್ಲದೆ ದಿನನಿತ್ಯ ಓಡಾಡುವ ಪ್ರಯಾಣಿಕರು ಎಲ್ಲೆಂದರಲ್ಲೆ ಕೂರುವ ಸ್ಥಿತಿ ಉದ್ಭವಿಸಿದೆ. ಟೇಕಲ್ ಬಸ್ ನಿಲ್ದಾಣದ ಪ್ರಸ್ತಾಪ ಅವರ ಕಡತಗಳಲ್ಲೆ ಇಲ್ಲದಾಗಿದೆ. ಪ್ರತಿ ದಿನ ಇಲ್ಲಿಗೆ ಸಾವಿರಾರು ಜನ ಬಂದು ಹೋಗುತ್ತಾರೆ. ಒಂದು ಸುಸಜ್ಜಿತ ರೈಲು ನಿಲ್ದಾಣ, ಆರೋಗ್ಯ ಕೇಂದ್ರ, ಕಾಲೇಜು, ಪ್ರೌಢಶಾಲೆ, ವಾಣಿಜ್ಯ ಕೇಂದ್ರ ಇತರೆ ಇಲಾಖಾ ಕೇಂದ್ರಗಳು, ಖಾಸಗಿ ಶಾಲೆಗಳಿದ್ದು ಸುತ್ತಮುತ್ತಲೂ ನೂರಕ್ಕೂ ಹೆಚ್ಚು ಹಳ್ಳಿಗಳಿಂದ ದಿನವಹಿ ಜನ ಬಂದು ಹೋಗುತ್ತಾರೆ. ಟೇಕಲ್ ಸರ್ಕಲ್‌ನಲ್ಲೂ ಮೂರು ಕಡೆಯಿಂದ ಬಸ್ಸುಗಳು ಓಡಾಡುತ್ತಿದ್ದು ದಾರಿಯಲ್ಲೆ ನಿತ್ಯ ಪ್ರಯಾಣಿಕರು ಇಳಿಸಿ ಹತ್ತಿಸಿಕೊಂಡು ಹೋಗುತ್ತಾರೆ. ಸರ್ಕಾರಿ ಬಸ್ ನಿಲ್ದಾಣ ಮಾಡಲು ಟೇಕಲ್‌ನಲ್ಲಿ ಸರಿಯಾದ ಸರ್ಕಾರಿ ಜಾಗವಿಲ್ಲದಾಗಿದೆ. ರಸ್ತೆ ಪಕ್ಕದಲ್ಲಿ ಜಾಗ ಕೆಲವರು ಈ ಹಿಂದೆಯೆ ಆಕ್ರಮಿಸಿಕೊಂಡಿದ್ದು ನೂತನ ಬಸ್ ನಿಲ್ದಾಣ ಕಟ್ಟಲು ಸ್ಥಳವಿಲ್ಲದ್ದಾಗಿದೆ. ಟೇಕಲ್‌ನಲ್ಲಿ ಉತ್ತಮ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿ ಕೊಡಲಿ ಎಂಬುದು ಜನತೆಯ ಆಶಯವಾಗಿದೆ.