ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾರತಮ್ಮ ಮಾಲೂರು ಪುರಸಭೆ ಅಧ್ಯಕ್ಷೆ, ಶ್ರೀವಲ್ಲಿ ಉಪಾಧ್ಯಕ್ಷೆ

Srinivasa Murthy VN
Updated On : 10 Mar 2014, 11:44 am

ಮಾಲೂರು: ಇಲ್ಲಿನ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಭಾರತಮ್ಮ ಹಾಗೂ ಉಪಾಧ್ಯಕ್ಷರಾಗಿ ಶ್ರೀವಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆ ಚುನಾವಣೆ ನಡೆದು ಒಂದು ವರ್ಷದ ನಂತರ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿ ನಡೆದ ಇಂದಿನ ಚುನಾವಣೆಯಲ್ಲಿ 14 ನೇ ವಾರ್ಡ್ ಸದಸ್ಯೆ ಭಾರತಮ್ಮ ಅಧ್ಯಕ್ಷ ಸ್ಥಾನಕ್ಕಾಗಿ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕಾಗಿ 5 ನೇ ವಾರ್ಡ್ ಸದಸ್ಯೆ ಶ್ರೀವಲ್ಲಿ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇವರಿಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಘೋಷಿಸಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಶಾಸಕ ಮಂಜುನಾಥ್ ಗೌಡ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯರ ಅವಿರೋಧ ಆಯ್ಕೆಯಾದ ನಂತರ ಮಾತನಾಡಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ದುಡಿಯಬೇಕಾಗಿದೆ. ಅಧ್ಯಕ್ಷರ ಚುನಾವಣೆಗಳು ಸದಸ್ಯರಲ್ಲೇ ಭಿನ್ನಮತಕ್ಕೆ ಕಾರಣವಾಗಿ ಅಭಿವೃದ್ಧಿಗಳಿಗೆ ಮಾರಕವಾಗುವುದರಿಂದ ಅವಿರೋಧ ಆಯ್ಕೆ ಉತ್ತಮ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನೂತನವಾಗಿ ಅಧ್ಯಕ್ಷೆಯಾಗಿ  ಆಯ್ಕೆಯಾದ ಭಾರತಮ್ಮ ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷರಾಗಲು ಸಹಕರಿಸಿದ ಪಕ್ಷದ ಹಿರಿಯರಿಗೂ ಹಾಗೂ ಶಾಸಕ ಮಂಜುನಾಥ್ ಗೌಡರವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಭಾರತಮ್ಮ ರವರು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸಹ ಸದಸ್ಯರ ಸಹಕಾರದಲ್ಲಿ ಪಟ್ಟಣವನ್ನು ಮಾದರಿಯಾಗಿ ಮಾಡುವುದಾಗಿ ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾ ರೆಡ್ಡಿ, ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ಪುರಸಭೆ ಸದಸ್ಯರಾದ ಸಿ.ಪಿ. ನಾಗರಾಜ್, ಎಂ.ಪಿ. ವಿಜಯಕುಮಾರ್, ವೇಮನ, ರಾಮಮೂರ್ತಿ, ಮೀನಾ ಆಂಜಿ, ಗುಲಾಬ್ ಜಾನ್, ಗೀತಾ ವೆಂಕಟೇಶ್, ಸುಲೋಚನ, ಲಿಂಗೇಶ್, ಜಾಕೀರ್, ಲಕ್ಷ್ಮಿನಾರಾಯಣ್, ಮುರಳಿ, ಸೋಮಣ್ಣ, ಹನುಮಂತ ರೆಡ್ಡಿ, ಅಲೂಮಂಜು, ಪಚ್ಚಪ್ಪ, ಮಾಲಾದ್ರಿ, ಮುಖಂಡರಾದ ತಬಲನಾರಾಯಣಪ್ಪ, ಪಂಚೆ ನಂಜುಂಡಪ್ಪ, ವೆಂಕಟೇಶ್ ಇದ್ದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದ ಹಾಗೆ ಬಿಜೆಪಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸಮ್ಮುಖದಲ್ಲಿ ಗ್ರಾಮ ದೇವತೆ ಮಾರಿಕಾಂಭ ದೇವಾಲಯದಲ್ಲಿ ವಿಶೇಷ ಪೊಜೆ ನಡೆಸಲಾಯಿತು.

ಶಾಸಕ ಮಂಜುನಾಥ್‌ಗೌಡರ ಪಾತ್ರ ಮಹತ್ತರ
ಮಾಲೂರು: ಇಲ್ಲಿನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಅವಿರೋಧ ಆಯ್ಕೆಯಾಗುವಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಗೌಡರ ಪಾತ್ರ ಮಹತ್ತರವಾಗಿದ್ದು, ಶಾಸಕರ ಈ ರೀತಿಯ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಲೋಕ ಸಭೆ ಚುನಾವಣೆ ಹತ್ತಿರವಿರುವಾಗ ಕಾರ್ಯಕರ್ತರ ಉತ್ತೇಜನಕ್ಕಾಗಿ ತಮ್ಮನ್ನು ಸೇರಿಸಿಕೊಂಡು 9 ಸದಸ್ಯ ಬಲವಿದ್ದ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಹಾಕಿ ತಮ್ಮ ಅಸ್ತಿತ್ವ ತೋರಿಸಬೇಕಾದ ಶಾಸಕ ಮಂಜುನಾಥ್ ಗೌಡರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆಸುತ್ತಿದ್ದ ಲಾಬಿಯನ್ನು ನಿಲ್ಲಿಸಿದರಲ್ಲದೇ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಬಹುಮತವಿರುವ ಬಿಜೆಪಿ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾಗಲಿ ಎಂದು ತಮ್ಮ ಪಕ್ಷದ ಸದಸ್ಯರಿಗೆ ತಿಳಿಸಿದ್ದ ಶಾಸಕ ಮಂಜುನಾಥ್ ಗೌಡರು ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಗಳಿಗೆಯಿಂದ ಪುರಸಭೆಯಲ್ಲಿ ಬೀಡು ಬಿಟ್ಟು ಆಯ್ಕೆ ಘೋಷಣೆ ಯಾದನಂತರ ಮುಳಬಾಗಿಲ ಕಡೆ ಹೊರಟರು. ಈ ಸಂಧರ್ಭದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಶಾಸಕ ಮಂಜುನಾಥ್ ಗೌಡರು ಸದಸ್ಯ ಆಯ್ಕೆಯಾಗಿ ನಡೆಯುವ ಚುನಾವಣೆಗೆ ಪಕ್ಷ-ರಾಜಕೀಯ ಬೇಕು. ಆದರೆ ಚುನಾಯಿತರಾದ ಮೇಲೆ ಕೇವಲ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಸುವುದರಿಂದ ಸದಸ್ಯರಲ್ಲಿ ಗುಂಪುಗಾರಿಕೆ ಬೆಳೆದು ಪಟ್ಟಣದ ಅಭಿವೃದ್ಧಿಗೆ ಇನ್ನಿಲ್ಲದ ಅಡೆ ತಡೆಗಳು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸ್ಪರ್ಧೆಯನ್ನು ವಿರೋಧಿಸಿ ಅವಿರೋಧ ಆಯ್ಕೆಗೆ ಹೆಚ್ಚಿನ ಪ್ರಾಶಸ್ಸತ್ಯ ನೀಡಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement