ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮರಳು ಕಳವು: ಆರೋಪ

Srinivasa Murthy VN
Updated On : 10 Mar 2014, 11:45 am

ಶ್ರೀನಿವಾಸಪುರ: 2 ವರ್ಷಗಳ ಹಿಂದೆ ಆಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿಗಳನ್ನು ಹಿಡಿದು 4 ಲಾರಿಗಳ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಮರಳು ಕಳ್ಳತನವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಇದ್ದ ತಹಸೀಲ್ದಾರ್, ಜಿಲ್ಲಾಧಿಕಾರಿ  ಆದೇಶದಂತೆ ಆಕ್ರಮವಾಗಿ ಸಾಗಿಸುತ್ತಿದ್ದ 4 ಮರುಳು ಲಾರಿಗಳನ್ನು ಹಿಡಿದು ಪಟ್ಟಣದ ಪೊಲೀಸ್ ಠಾಣೆ ಎದುರು ಮರುಳು ದಿಬ್ಬ ಹಾಕಿದ್ದು ಆದು ಯಾರಿಗೂ ಗೊತ್ತಿಲ್ಲದಂತೆ ದಿನೇ ದಿನೆ ಕಡಿಮೆಯಾಗುತ್ತಾ ಬಂದಿದೆ. 4 ಲಾರಿ ಮರಳಿನಲ್ಲಿ ಈಗ ಒಂದು ಲಾರಿಯಷ್ಟು ಮರಳು ಮಾತ್ರ ಉಳಿದುಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

ಅಪಘಾತ: ಬೈಕ್ ಸವಾರ ಸಾವು
ಬಾಗೇಪಲ್ಲಿ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದ ಆಂಜನೇಯಲು(20) ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ದೈವಿ.
 ಗೂಳೂರಿನಿಂದ ತನ್ನ ಸ್ವಗ್ರಾಮವಾದ ಚಿನ್ನಕಾಯಲಪಲ್ಲಿ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತಿಮ್ಮಂಪಲ್ಲಿ ಕಡೆಗೆ ಪ್ರಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ತಿಮ್ಮಂಪಲ್ಲಿ ಕಡೆಯಿಂದ ಅತೀ ವೇಗವಾಗಿ ಬಂದ ಅಪರಿಚಿತ ವಾಹನಮೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
 ಈ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಆಂಜನೇಯಲು ಮೃತಪಟ್ಟಿದ್ದಾನೆ. ಈತ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.
  ಬಾಗೇಪಲ್ಲಿ ಪೊಲೀಸ್ ಉಪನಿರೀಕ್ಷಕ ವಿ.ಮುನಿರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement