ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿಗೆ ಶಕ್ತಿ ಮೀರಿ ಶ್ರಮಿಸುವೆ: ಕೇಶವ ಭರವಸೆ

Srinivasa Murthy VN
Updated On : 10 Mar 2014, 11:45 am

ಮುಳಬಾಗಲು: ತಾಲೂಕಿನ ಕುರುಡುಮಲೆ ಗ್ರಾಮದ ಪುರಾಣ ಪ್ರಸಿದ್ಧ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜೆಡಿಎಸ್ ಚುನಾವಣೆ ಪ್ರಚಾರ ಸಭೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕೋಲಾರ ಕೇಶವ ಅವರನ್ನು ಘೋಷಿಸಲಾಯಿತು.
 ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಈ ಆಯ್ಕೆಯನ್ನು ಘೋಷಿಸಿ ಮಾತನಾಡಿ ರಾಜ್ಯದ ಸಮಸ್ಯೆಗಳ ಪರಿಹಾರ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಾಗದ ಮಾತು. ಹೆಚ್ಚಿನ ಸಂಖ್ಯೆಯ ಜೆಡಿಎಸ್ ಸದಸ್ಯರು ಸಂಸತ್ ಪ್ರವೇಶಿಸಿದಲ್ಲಿ ರಾಜ್ಯದ ಸಮಸ್ಯೆಗಳಿಗೆ ಹೋರಾಟ ನಡೆಸಲು ಸಾಧ್ಯವಾಗುವುದು ಎಂದರು.
ಬಡ ಕುಟುಂಬದಿಂದ ಬಂದಿರುವ ಕೋಲಾರ ಕೇಶವ ಅವರಿಗೆ ಜಿಲ್ಲೆಯ ರೈತರ, ಶ್ರೀಸಾಮಾನ್ಯರ ಸಮಸ್ಯೆಗಳ ಕುರಿತು ಅರಿವಿದೆ ಎಂದೂ ಅವರು ನುಡಿದರು.
ಪಕ್ಷದ ಅಭ್ಯರ್ಥಿ ಕೋಲಾರ ಕೇಶವ ಮಾತನಾಡಿ ತಾವು ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು ಬಡ ಜನರ ಬವಣೆ ತಿಳಿದಿದೆ. ತಮ್ಮನ್ನು ಆಯ್ಕೆ ಮಾಡಿದಲ್ಲಿ ತಾವುಗಳು ಜಿಲ್ಲೆಯ ಯುವಕರ ನಿರುದ್ಯೋಗ ಸಮಸ್ಯೆ ಪರಿಹರಿಸುವುದರೊಂದಿಗೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳು ಬರುವಂತೆ ಮಾಡಲು ಶ್ರಮಿಸುವುದಾಗಿ ನುಡಿದರು.
ಚಿಂತಾಮಣಿ ಶಾಸಕ ಕೃಷ್ಣರೆಡ್ಡಿ, ಮಾಲೂರು ಶಾಸಕ ಮಂಜುನಾಥಗೌಡ, ಶಿಡ್ಲಘಟ್ಟ ಶಾಸಕ ರಾಜಣ್ಣ ಮಾತನಾಡಿ ಕಾಂಗ್ರೆಸ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕಳೆದ ಚುನಾವಣೆಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಭರವಸೆ ಈಡೇರಿಸಿಲ್ಲವೆಂದು ಆರೋಪಿಸಿದರು. ಎತ್ತಿನಹೊಳೆ ಯೋಜನೆಯನ್ನು ತರಾತುರಿಯಾಗಿ ಜಾರಿಗೆ ತಂದಿದ್ದು ಇದರಿಂದ ಉಭಯ ಜಿಲ್ಲೆಗಳವರು ಕೇವಲ ಪೈಪ್‌ಗಳನ್ನು ಮಾತ್ರ ನೋಡಿ ಸಂತೋಷ ಪಡಬೇಕಾಗುತ್ತದೆಂದರು.   ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ನೀರಾವರಿ ತಜ್ಞ ಡಾ. ಮಧುಸೀತಪ್ಪ ಮಾತನಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ, ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜಿ.ಪಂ. ಉಪಾಧ್ಯಕ್ಷೆ  ಅಲುವೇಲಮ್ಮ ರಾಜಗೋಪಾಲ್, ತಾ.ಪಂ. ಮಾಜಿ ಅಧ್ಯಕ್ಷ ಸಿ.ವಿ.ಗೋಪಾಲ್, ಜಿ.ಪಂ. ಸದಸ್ಯ ಕೆ.ಆರ್. ಕಿಟ್ಟಪ್ಪ,  ಶ್ರೀನಿವಾಸರೆಡ್ಡಿ, ಶ್ರೀಕೃಷ್ಣ, ತೇಜೋರಮಣ, ರಾಮೋಜಿ, ಕುರುಮಲೆ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕರು ಕೋಲಾರ ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷರನ್ನಾಗಿ ಕೆ.ಆರ್. ರಾಜೇಶ್ವರಿಯವರನ್ನು ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement