ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭ್ರೂಣಲಿಂಗ ಪತ್ತೆ ತಂತ್ರ ನಿಷೇಧ ಕಾಯ್ದೆ ಕಾರ್ಯಾಗಾರ

Srinivasa Murthy VN
Updated On : 14 Mar 2014, 12:36 pm

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಸಭಾ ಸಭಾಂಗಣದಲ್ಲಿ ಮಾ.15 ರಂದು ಬೆಳಗ್ಗೆ 10 ಗಂಟೆಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ನಿಷೇಧ ಕಾಯಿದೆ (1994) ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಚಿಂತಾಮಣಿ ವಕೀಲರ ಸಂಘ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಆಯೋಜಿಸಿರುವ ಸಮಾರಂಭದ ಉದ್ಘಾಟನೆಯನ್ನು ಪಾಸ್ಟ್ ಟ್ರ್ಯಾಕ್ ಕೋರ್ಟಿ ಅಢಾಕ್ ಜಿಲ್ಲಾ ನ್ಯಾಯಾಧೀಶ ಎ.ಕೆ.ನವೀನ್ ಕುಮಾರಿ ನೆರವೇರಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಸ್.ಜಿ. ಸಲಗರೆ, ಬಿ.ಸಿ. ಚಂದ್ರಶೇಖರ್, ಚಿಂತಾಮಣಿ ವಕೀಲರ ಸಂಘ ಅಧ್ಯಕ್ಷ ಎಸ್. ಕೃಷ್ಣಮೂರ್ತಿ, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಡಾ. ಸಾವಿತ್ರಿ ಮಂಜುನಾಥ್, ಡಾ.ಬಿ.ಎನ್. ರವೀಂದ್ರ, ತಮ್ಮೇಗೌಡ, ಕವನ, ವೆಂಕಟರೆಡ್ಡಿ, ಸುಧಾಕರ್, ಕೆ. ಚಿತ್ರಾವತಿ, ತಹಸೀಲ್ದಾರ್ ಕೆ.ಟಿ. ಕೃಷ್ಣಸ್ವಾಮಿ, ನಗರಸಭೆ ಆಯುಕ್ತ ಚೆನ್ನೇಗೌಡರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಬಿ.ಸಿ. ವಂಸತಕುಮಾರ್, ಶಿಶು ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ಪದ್ಮನಾಭನ್, ಸರ್ಕಾರಿ ವಕೀಲ ರೆಹಮಾನ್ ಮುಂತಾದವರು ಭಾಗವಹಿಸುವರು.
ಮಧ್ಯಮ ಮತ್ತು ಪ್ರಚಾರ ಸಮಿತಿ ಭಾ.ವೈ.ಸಂಘದ ಸದಸ್ಯ ಡಾ.ವಿ.ಸಿ. ಷಣ್ಮುಗಾನಂದನ್ ಲಿಂಗಾನುಪಾತದ ದುಷ್ಪರಿಣಾಮಗಳ ಕುರಿತು, ವಕೀಲೆ ರೂಪಶ್ರೀ ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಸುರೇಂದ್ರನಾಥ್ ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯ ಆಡಳಿತಾತ್ಮಕ ವಿಚಾರಗಳು ಹಾಗೂ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ, ಮಕ್ಕಳ ತಜ್ಞ ಡಾ. ವೆಂಕಟಾಚಲಪತಿ ಲಿಂಗಾನುಪಾತ ಸರಿಪಡಿಸುವ ಕ್ರಮಗಳ ಕುರಿತು ಉಪನ್ಯಾಸ ನೀಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement