ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರುಣನ ಆವಕೃಪೆ; ಮಾರ್ಕಂಡೇಯ ಡ್ಯಾಂ ಬರಿದು

Srinivasa Murthy VN
Updated On : 14 Mar 2014, 12:35 pm

-ಕೆ. ರಮೇಶ್
ಬಂಗಾರಪೇಟೆ:
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ತಾಲೂಕಿನ ಮಿನಿ ಕೆಆರ್‌ಎಸ್ ಎಂದೇ ಖ್ಯಾತವಾಗಿರುವ ಮಾರ್ಕಂಡೇಯ ಜಲಾಶಯ ಕಳೆದ 8 ವರ್ಷಗಳಿಂದ ವರುಣನ ಕೃಪೆಯಿಲ್ಲದೆ ಸಂಪೂರ್ಣವಾಗಿ ನೀರಿಲ್ಲದೆ ಭಣಗುಡುತ್ತಿದೆ.
1936ರಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವಧಿಯಲ್ಲಿ ಜಲಾಶಯದ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಂದಿನ ಗೌವರ್ನರ್ ಮಿರ್ಚಾ ಅಸ್ಮಾಯಿಲ್ ನೇತೃತ್ವದಲ್ಲಿ 4.35 ಲಕ್ಷ ವೆಚ್ಚದಲ್ಲಿ ಎಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು  ಅಣೆಕಟ್ಟಿನ ಕಾಮಗಾರಿಯ ಉಸ್ತುವಾರಿ ವಹಿಸಿ ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಿ 1940ರಲ್ಲಿ ಜನರಿಗೆ ಸಮರ್ಪಿಸಿದರು. ಅಂದಿನಿಂದ ಇಂದಿನವರೆಗೂ 8ವರ್ಷಗಳ ಹಿಂದೆ ಒಮ್ಮೆ ಮೈದುಂಬಿ ಹರಿದಿದ್ದು ಬಿಟ್ಟರೆ ಇದುವರೆಗೂ ಮಳೆ ಕೊರತೆಯಿಂದ ಮೈದುಂಬಿ ಹರಿಯದೆ ಬರಡಾಗಿದೆ.
81 ಅಡಿ ಎತ್ತರದ ಈ ಜಲಾಶಯದ ಅಣೆಕಟ್ಟಿನಲ್ಲಿ 79 ಅಡಿ ನೀರು ಸಂಗ್ರವಾಗುವ ಸಾಮರ್ಥ್ಯವಿದೆ. ಸರಾಸರಿ 8.200 ಕ್ಯೂಸೆಕಕ್ಸ್ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತದೆ.ಜಲಾಶಯದ ನೀರನ್ನು ರೈತರ ಬೆಳೆಗಳಿಗೆ ಹರಿಸಬೇಕೆಂದರೆ ಕನಿಷ್ಟ 61.60ಅಡಿ ಸಂಗ್ರಹವಾಗಬೇಕು.ಪ್ರಸ್ತುತ ನೀರು ಒಂದಡಿಯಷ್ಟೂ ಇಲ್ಲ. ಅಣೆಕಟ್ಟು ನಿರ್ಮಾಣದ ನಂತರ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿರುವುದು 8 ವರ್ಷಗಳಿಂದ ಇಚೇಗೆ ಮಾತ್ರ.2005ಲ್ಲಿ ಜೂನ್‌ನಿಂದ ಡಿಸೆಂಬರ್‌ವರೆಗೂ ನಿರಂತರ ಕೋಡಿ ಹರಿದಿರುವುದು ದಾಖಲೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು. 8 ವರ್ಷಗಳ ಹಿಂದೆ ಜಲಾಶಯದಲ್ಲಿ ನೀರಿದ್ದಾಗ ವರ್ಷಕ್ಕೆ ಎರಡು ಬಾರಿ ಬೆಳೆಗಳಿಗೆ ನೀರು ಬಿಡಲಾಗುತ್ತಿತ್ತು. ಆದರೆ ಈಗ ಜಲಾಶಯದಲ್ಲೇ ನೀರಿಲ್ಲದ ಕಾರಣ ಇದರ ಸುತ್ತುಮುತ್ತಲಿನ ಅಚ್ಚುಕಟ್ಟಿನ ರೈತರು ಬೆಳೆ ಮಾಡಲಾಗದೆ ಕಂಗಾಲಾಗಿದ್ದಾರೆ.
ಈ ಜಲಾಶಯ ಒಂದು ಕಾಲದಲ್ಲಿ ಪ್ರವಾಸಿಗರ ತಾಣವಾಗಿತ್ತು. ಆದರೆ ಈಗ ನೀರಿಲ್ಲದ ಕಾರಣ ಪ್ರವಾಸಿಗರನ್ನು  ಸೆಳೆಯುವಲ್ಲಿ ವಿಫಲವಾಗಿದೆ,ಆಶ್ಚರ್ಯದ ಸಂಗತಿಯೆಂದರೆ ಜಲಾಶಯದ ನೀರಿನ ಸಂಗ್ರಹ ಸಂಪೂರ್ಣವಾಗಿ ಮಾಲೂರು ತಾಲೂಕಿನ ಪ್ರದೇಶದಿಂದಲೇ ಬರಬೇಕು. ಅಣೆಕಟ್ಟು ಹಾಗೂ ಅಚ್ಚುಕಟ್ಟು ಪ್ರದೇಶ ಮಾತ್ರ ಬಂಗಾರಪೇಟೆ ತಾಲೂಕಿನ ಒಳಪಡುತ್ತದೆ. ಕೆರೆ ಮಾಲೂರು ಕ್ಷೇತ್ರ ಕಡೆ ಇರುವುದರಿಂದ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಆಡಳಿತದಲ್ಲಿ ಅವರ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಈ ಜಲಾಶಯದಿಂದ ಎರಡು ಬೃಹತ್ ಟ್ಯಾಕರ್‌ಗಳನ್ನು ನಿರ್ಮಾಣ ಮಾಡಿರುವುದು ಬೂದಿಕೋಟೆ ರೈತರನ್ನು ಕೆರಳಿಸಿದೆ. ಈ ಬಗ್ಗೆ ಹಲವು ಹೋರಾಟ ಮಾಡಿದರು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರೆತೆಯಿಂದ ಫಲ ದೊರಕಿಲ್ಲ. ಇಲ್ಲಿನ ಜನರು ನೀರಿಗಾಗಿ ಹಪಹಪಿಸುತ್ತಿದ್ದರೂ ಇಂತಹ ಯೋಜನೆಯನ್ನು ಕೈಗೊಳ್ಳದೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರನ್ನು ಮರಳು ಮಾಡುವ ಕಾರ್ಯದಲ್ಲಿ ಸರ್ಕಾರಗಳಿವೆ. ಆದರೆ ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತ್ರ ಶಾಶ್ವತ ನೀರಾವರಿ ಜಾರಿಗೊಳಿಸಲು ಭಗೀರಥ ಪ್ರಯತ್ನದಲ್ಲಿರುವುದು ಕ್ಷೇತ್ರದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement