ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿನೂತನ ಪ್ರಶ್ನೆ ಕೋಠಿ ಬಿಡುಗಡೆ

Srinivasa Murthy VN
Updated On : 16 Mar 2014, 12:33 pm

ಕ.ಪ್ರ. ವಾರ್ತೆ, ಕೋಲಾರ, ಮಾ.15
ಇದೇ ತಿಂಗಳ ಮಾ.28 ರಿಂದ ಏ.9ರವರೆಗೆ ನಡೆಯಲಿರುವ ಹತ್ತನೇ ತರಗತಿ ಪರೀಕ್ಷೆಗೆ ಜಿಲ್ಲೆಯ 51ಮಂದಿ ವಿಕಲಚೇತನರೂ ಸೇರಿದಂತೆ 22,552 ವಿದ್ಯಾರ್ಥಿಗಳು ಕುಳಿತಿದ್ದು, ಇಲಾಖೆ ಸಿದ್ಧತೆ ನಡೆಸಿದೆಯಲ್ಲದೆ ಮಕ್ಕಳ ಅನುಕೂಲಕ್ಕಾಗಿ ವಿನೂತನ ಪ್ರಶ್ನೆ ಕೋಠಿಯನ್ನು ಹೊರ ತಂದಿದೆ.
ಶನಿವಾರ ಡಿಡಿಪಿಐ ಕಚೇರಿಯಲ್ಲಿ ಪ್ರಶ್ನೆ ಕೋಠಿಯನ್ನು ಡಿಡಿಪಿಐ ಪದ್ಮನಾಭ್ ಬಿಡುಗಡೆ ಮಾಡಿದರು. ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಗ್ಲಾನ್ಸ್ ಮೀ-ಒನ್(ನನ್ನನ್ನೊಮ್ಮೆ ಗಮನಿಸಿ) ಪ್ರಶ್ನೆ ಕೋಠಿಯನ್ನು ಹೊರತರಲಾಗಿದೆ.ಜಿಲ್ಲೆಯಲ್ಲಿ 21,041 ಮಂದಿ ಈ ಬಾರಿ ಹೊಸದಾಗಿ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 10,643ಬಾಲಕರು,10,398 ಬಾಲಕಿಯರು ಇದ್ದಾರೆ ಎಂದು ಡಿಡಿಪಿಐ ಪದ್ಮನಾಭ್ ತಿಳಿಸಿದ್ದಾರೆ.
ಉಳಿದಂತೆ 644 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 471 ಬಾಲಕ,173 ಬಾಲಕಿಯರಿದ್ದಾರೆ ಎಂದರು. ಖಾಸಗಿ ಅಭ್ಯರ್ಥಿಗಳು 654 ಮಂದಿ ಕುಳಿತಿದ್ದು, ಅವರಲ್ಲಿ 531 ಬಾಲಕ,123 ಬಾಲಕಿಯರಿದ್ದು, ಇವರಲ್ಲಿ ಪುನರಾವರ್ತಿತ ಅಭ್ಯರ್ಥಿಗಳಾಗಿ 190 ಬಾಲಕ, 23 ಬಾಲಕಿಯರು ಸೇರಿ 213 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆಂದರು.
ಜಿಲ್ಲೆಯ ಆರು ಕ್ಷೇತ್ರ ವಲಯಗಳಲ್ಲಿ ಬಂಗಾರಪೇಟೆ ತಾಲೂಕಿನಲ್ಲಿ 3,363 ಮಂದಿ ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 1,733 ಬಾಲಕ, 1,630 ಬಾಲಕಿಯರಿದ್ದಾರೆ.
ಕೆಜಿಎಫ್ ಶೈಕ್ಷಣಿಕ ವಲಯದಲ್ಲಿ 3,384 ಮಂದಿ ಕುಳಿತಿದ್ದು, 1,826 ಬಾಲಕ, 1,558 ಬಾಲಕಿಯರಿದ್ದು, ಕೋಲಾರ ತಾಲೂಕಿನಲ್ಲಿ ಒಟ್ಟು 5,709 ಮಂದಿ ಪರೀಕ್ಷೆಗೆ ಕುಳಿತಿದ್ದು, ಅವರಲ್ಲಿ 2,958 ಬಾಲಕರು ಹಾಗೂ 2,751 ಬಾಲಕಿಯರು ಎಂದು ಡಿಡಿಪಿಐ ತಿಳಿಸಿದರು. ಮಾಲೂರು-3,316 ಮಂದಿಯಲ್ಲಿ 1,737ಬಾಲಕ, 1,579ಬಾಲಕಿಯರಿದ್ದು, ಮುಳಬಾಗಿಲು-3,513 ಬಾಲಕರು ಹಾಗೂ 1,660 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದಾರೆಂದರು. ಶ್ರೀನಿವಾಸಪುರದಲ್ಲಿ 3,267 ಮಂದಿ ಪರೀಕ್ಷೆಗೆ ಕುಳಿತಿದ್ದು, 1,728ಬಾಲಕ, 1,539 ಬಾಲಕಿಯರಿದ್ದಾರೆಂದು ಮಾಹಿತಿ ನೀಡಿದರು.
ಜಿಲ್ಲಾದ್ಯಂತ 51 ಮಂದಿ ವಿಕಲಚೇತನರು ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 8 ಮಂದಿ ಕಣ್ಣು ಇಲ್ಲದವರು, 16 ಮಂದಿ ಮೂಗರು, ಕಿವುಡರು, 18 ಮಂದಿ ಅಂಗವೈಕಲ್ಯವುಳ್ಳವರು, 3 ಕಿವಿ ಕೇಳದವರು ಹಾಗೂ 6 ಮಂದಿ ಕಲಿಕಾ ನೂನ್ಯತೆತಯುಳ್ಳವರಿದ್ದಾರೆಂದು ತಿಳಿಸಿದರು.
ಪರೀಕ್ಷಾ ಅವ್ಯವಹಾರ ತಡೆಯಲು ಜಿಲ್ಲಾ ಹಂತದಲ್ಲಿ ಡಿಡಿಪಿಐ ಹಾಗೂ ಡಿವೈಪಿಸಿ, ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ಮೂರು ಜಾಗೃತದಳ, ತಾಲೂಕು ಮಟ್ಟದಲ್ಲಿ ಬಿಇಒ ನೇತೃತ್ವದಲ್ಲಿ ಜಾಗೃತದಳಗಳು ಹಾಗೂ ಅಂತರಜಿಲ್ಲಾ ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಕೆ.ಎಂ. ಜಯರಾಮರೆಡ್ಡಿ, ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್, ವಿಷಯ ಪರಿವೀಕ್ಷಕ ಬಾಬು ಜನಾರ್ದನನಾಯ್ಡು, ಶಿವಮಾದಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement